2 ಮೇರ ದೈನಂದಿನ ಭಕ್ತಿಚಿಂತನೆ
ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು. ೨ ತಿಮೊಥೆಯನಿಗೆ 3:12
ವಿರೋಧ ನಿರೀಕ್ಷಿತ, ಆದರೂ ಈ ವಿರೋಧ ಮರಣದ ಪರ್ಯಂತ ಮುಂದುವರೆಯುವದು. ಈ ವಿರೋಧಕ್ಕೆ ನಮ್ಮನ್ನು ನಾವು ತಾಳ್ಮೆಯಿಂದ ಒಳಪಡಿಸುವಾಗ ನಾವು ಸ್ವಾಭಾವಿಕವಾಗಿ ಅನುಭವಿಸಬಹುದಾದ ಸ್ನೇಹ ಮತ್ತು ಈ ಜೀವನದ ಸಂತೋಷವನ್ನು ತ್ಯಾಗ ಮಾಡಬೇಕಾಗುತ್ತದೆ ಮತ್ತು ಕ್ರಿಸ್ತನ ಒಳ್ಳೇ ಸೈನಿಕನಾಗಿ ಬರುವಂತ ಎಲ್ಲಾ ಸಂಕಷ್ಟ ಸಂಗತಿಗಳನ್ನು ತಾಳಬೇಕಾಗುವುದು. ನಾವು ಕರ್ತನ ಚಿತ್ತ ಮತ್ತು ದೇವರ ರಾಜ್ಯದ ವಿಷಯವಾದ ಸತ್ಯವನ್ನು ಪ್ರಚಾರ ಮಾಡುವಾಗ ಈ ಸಂಕಷ್ಟಗಳು, ಹಿಂಸೆಗಳು ಯಾವ ವಿಧದಲ್ಲಾದರೂ ಬರಬಹುದು. ನಾವು ನಿಜವಾಗಿಯೂ ಕ್ರಿಸ್ತನ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ಮೊದಲನೆಯದು, ನಾವು ಬಹು ಎಚ್ಚರಿಕೆಯಿಂದ ದೇವರ ಯೋಜನೆಯನ್ನು ಅಧ್ಯಯನ ಮಾಡುವದು; ಎರಡನೆದಾಗಿ ಅದರ ನಡೆಸುವಿಕೆ ಮತ್ತು ಅದರಲ್ಲಿರುವ ಅರ್ಥಗಳನ್ನು ಗ್ರಹಿಸುವದು; ಮೂರನೆದಾಗಿ ಉತ್ಸುಕತೆಯಿಂದಲೂ ಮತ್ತು ಆಸಕ್ತಿಯಿಂದಲೂ ನಮ್ಮಲ್ಲಿರುವ ಸಾಮಥ್ರ್ಯಕ್ಕೆ ತಕ್ಕಂತೆ ಕಾರ್ಯ ಸಾಧಿಸಿ ಸಿದ್ಧಿಗೆ ಬರಲು ಯಾವ ತ್ಯಾಗ ಮಾಡಲಿಕ್ಕೂ ಸಿದ್ಧರಾಗಬೇಕು-Z ’03, 164, 165 R3199

