21 ಮೇರ ದೈನಂದಿನ ಭಕ್ತಿಚಿಂತನೆ
ದೈವ ಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ, ನೀತಿ ಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲ ಸತ್ಕಾರ್ಯಕ್ಕೆ ಸನ್ನದ್ಧನಾಗುವನು. ೨ ತಿಮೊಥೆಯನಿಗೆ 3:16, 17
ನಾವೆಲ್ಲರೂ ನೆನಪಿಸಿಕೊಳ್ಳುವ ಒಳ್ಳೆಯ ವಿಷಯವೇನಂದರೆ, ದೇವರಾತ್ಮನ ಸಕಲ ಗುಣಗಳು ಮತ್ತು ನಾವು ಈಗಾಗಲೇ ದೇವರ ವಿಷಯದ ಜ್ಞಾನದಲ್ಲಿ ಸಿದ್ಧಿಗೆ ಬಂದಿರುವದರಿಂದ, ನಾವು ದೇವರ ಬಳಿಗೂ ಮತ್ತು ಪರಿಶುದ್ಧರಾಗಲು ನಮಗೆ ಹಳೇ ಒಡಂಬಡಿಕೆಯ ದೈವೋಕ್ತಿಗಳಿಂದಲೂ ಮತ್ತು ಕರ್ತನ ವಾಕ್ಯಗಳಿಂದಲೂ ಆತನಿಂದ ಪ್ರೇರಿತರಾದ ಅಪೋಸ್ತಲರಿಂದಲೂ ಸಹಾಯ ಒದಗಿಬಂದಿರುವುದರಿಂದ, ಸತ್ಯಜ್ಞಾನ ಅದರಲ್ಲಿ ಅಡಕವಾಗಿರುವ ವಾಗ್ದಾನ ಸಹಿತವಾದ ರಕ್ಷಣೆಯನ್ನು ಪಡೆಯಲು ಬೇರೆ ಯಾರ ಬಳಿಗೂ ಹೋಗುವ ಅವಶ್ಯಕತೆಯಿಲ್ಲ-Z ’97, 170 (R2165). R2166

