2 ಜೂನ್ರ ದೈನಂದಿನ ಭಕ್ತಿಚಿಂತನೆ
ನಾನು ಶಿಲುಬೆಗೆ ಹಾಕಲ್ಪಟ್ಟವನಾದ ಯೇಸುಕ್ರಿಸ್ತನನ್ನೇ ಹೊರತು, ಬೇರೆ ಯಾವದನ್ನು ತಿಳಿದವನಾಗಿ ನಿಮ್ಮಲ್ಲಿ ಇರುವನೆಂದು ತೀರ್ಮಾನಿಸಿಕೊಂಡೆನು. ೧ ಕೊರಿಂಥದವರಿಗೆ 2:2
ದೇವರಿಗೆ ಪ್ರತಿಷ್ಠೆಪಡಿಸಿಕೊಂಡವರಲ್ಲಿ ನಾವು ಗಮನಿಸಿರುವ ಸಂಗತಿ ಏನಂದರೆ, ಈ ಸುವಾರ್ತೆಯನ್ನಲ್ಲದೆ, ಬೇರೆ ಧ್ಯೇಯಗಳ ಬಗ್ಗೆ, ವಿಷಯಗಳ ಬಗ್ಗೆ ತಮ್ಮ ಸಮಯ ಮತ್ತು ತಲಾಂತನ್ನು ವಿನಿಯೋಗಿಸುವದನ್ನು, ಬೇರೆ ಯಾವ ವಿಷಯವಾಗಲೀ ಅಥವ ಆ ವಿಷಯಗಳು ಎಷ್ಟೇ ಕುತೂಹಲಕಾರಿಯಾಗಿದ್ದರೂ ಅವುಗಳಿಗೆ ಆಧ್ಯತೆ ಕೊಡದೆ ತಮಗಿರುವ ಸಮಯ ಮತ್ತು ಸಾಮಥ್ರ್ಯವನ್ನು ಸುವಾರ್ತ ಸೇವೆಗೇ ಉಪಯೋಗಿಸಬೇಕೆಂದು ಸಲಹೆ ಕೊಡುತ್ತೇವೆ. ಯಾಕಂದರೆ, ನಮಗೆ ದೇವರು ದಯಪಾಲಿಸುವ ಮುಂದಣ ಜೀವದಲ್ಲಿ ಎಲ್ಲಾ ಜ್ಞಾನ ವಿಷಯಗಳು ನಮ್ಮದಾಗಿರುತ್ತವೆ. ಬೇರೆ ವಿಷಯಗಳಿಗೆ ಗಮನಕೊಡುವದನ್ನು ತಪ್ಪಿಸುವ ಅವಕಾಶ ಅವರಿಗಿದ್ದರೂ ಅದನ್ನು ಗಣನೆಗೆ ತಾರದೆ ಮುಂದುವರೆಯುವವರು ಬಹು ಬೇಗ ಸತ್ಯ ಸುವಾರ್ತೆಯನ್ನು ಸಾರುವ ಕಾರ್ಯದಿಂದ ತಪ್ಪುವವರು ಅಥವ ಈ ವಿಷಯಗಳು ಅವರು ನಡೆಯುವ ಮಾರ್ಗದಲ್ಲಿ ಅಡ್ಡಿಯಾಗಿ ದೇವರ ರಾಜ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ-Z ’95, 116 R1811

