21 ಜೂನ್ರ ದೈನಂದಿನ ಭಕ್ತಿಚಿಂತನೆ
ನಾನು ಸಾತ್ವಿಕನೂ, ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ. ಮತ್ತಾಯನು 11:29
ನೆಮ್ಮದಿಯ ರಹಸ್ಯ ನಿಜವಾಗಿಯೂ ದೀನ ಮತ್ತು ಶಾಂತ ಸ್ವಭಾವದಲ್ಲಿದೆ. ದೀನನಾಗಿರುವುದು ಅಂದರೆ, ಶಾಂತ ಸ್ವಭಾವವನ್ನ ಅಭ್ಯಾಸ ಮಾಡುವದು ಮತ್ತು ಪ್ರೀತಿಯಿಂದ ದೇವರ ಚಿತ್ತಕ್ಕೆ ತನ್ನನ್ನು ಒಪ್ಪಿಸಿ ದೇವರ ತಪ್ಪಿಹೋಗದ ಭರವಸೆ ಆತನ ಪ್ರೀತಿ ಮತ್ತು ಪರಾಮರಿಕೆ, ಆತನ ಜ್ಞಾನಯುಕ್ತವಾದ ಮಾರ್ಗದರ್ಶನ ಮತ್ತು ಎಲ್ಲವನ್ನು ಮೀರಿ ಕರ್ತನು ನಮಗೆ ಅನುಗ್ರಹಿಸುವ ಆಶೀರ್ವಾದ ಇವುಗಳನ್ನಾಧರಿಸಿ ಹಾಗೇ ನಾವು ನಡೆಯುವ ಹಾದಿಯಲ್ಲಿ ಒಳ್ಳೆಯ ಅಥವ ಕೆಟ್ಟ ಸಂಗತಿಗಳೂ ಸಂಭವಿಸಿದುಂಟು ಇದರ ಜೊತೆಯಲ್ಲೆ ಅನುಕೂಲ ಅಥವ ಅನಾನುಕೂಲ ಸಂದರ್ಭಗಳು ಬಂದೊದಗುವುದುಂಟು. ಹೀಗಿರುವಲ್ಲಿ ದೇವರ ಅತಿಪ್ರಿಯ ಮಕ್ಕಳು ಕ್ರಿಸ್ತನ ಸಾತ್ವಿಕತ್ವವನ್ನು ಸಮಾಧಾನವನ್ನು ಹೆಚ್ಚೆಚ್ಚಾಗಿ ಅನುಕರಣೆ ಮಾಡಿ, ಆತನ ಅನುಗ್ರಹವನ್ನು ಅಂಗೀಕರಿಸಿ, ಹೇಗೆ ಕರ್ತನು ದೇವರ ಸೂತ್ರ ಮತ್ತು ನಿರ್ದೇಶನವನ್ನು ತನ್ನ ಆಯುಧವನ್ನಾಗಿಸಿಕೊಂಡು ನಡೆದನೋ, ಹಾಗೆಯೇ ಯಾರು ಕರ್ತನ ಚಿತ್ತದಂತೆ ನಡೆಯುವರೋ ಅಂತಹವರು ಆತನ ನೊಗವನ್ನು ಹೊತ್ತು ಆತನಲ್ಲಿ ಕಲಿಯುವರು. ಆಂಥವರಿಗೆ ಕರ್ತನು ಬಲವನ್ನು ಅನುಗ್ರಹಿಸುವನು.-Z-’96,79 (R1961) R1962

