2 ಏಪ್ರಿಲ್ರ ದೈನಂದಿನ ಭಕ್ತಿಚಿಂತನೆ
ಆದದರಿಂದ, ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ. ಮುಖ್ಯವಾಗಿ ಒಂದೇ ಮನೆಯಂತಿರುವ ಕ್ರಿಸ್ತ ನಂಬಿಕೆಯುಳ್ಳವರಿಗೆ ಮಾಡೋಣ. ಗಲಾತ್ಯದವರಿಗೆ 6:10
ಕ್ರೈಸ್ತನಾದವನು ಎಲ್ಲರಿಗೂ ಒಳ್ಳೇದನ್ನು ಮಾಡುವದಕ್ಕೆ ತನಗೆ ಸಮಯವಿರಲಿ, ಇಲ್ಲದಿರಲಿ, ಅನುಕೂಲವಿರಲಿ, ಅನಾನುಕೂಲವಿರಲಿ, ಸಿದ್ಧನಾಗಿರಬೇಕು. ಇದಲ್ಲದೆ, ಸಹೋದರರಿಗಾಗಿ ಪ್ರಾಣವನ್ನೇ ಕೊಡುವಷ್ಟರಮಟ್ಟಿಗೆ ತಯಾರಿರಬೇಕು. ಹಾಗೆ ಅನುದಿನವೂ ಈ ಪ್ರಾಣತ್ಯಾಗದ ಕರ್ತವ್ಯ ನೆರವೇರಿಸುತ್ತಿರಬೇಕು. ಹೇಗಂದರೆ, ಸತ್ಯಪ್ರಚಾರಕ್ಕಾಗಿ ತನ್ನ ಕಾಲವನ್ನು ವ್ಯಯ ಮಾಡುತ್ತಿರಬೇಕು. ಸಹೋದರರಿಗೆ ಬೇಕಾದಲ್ಲಿ ಸಹಾಯವಾಗುವಂತೆಯೂ ನಡಕೊಳ್ಳಬೇಕು. ಹಾಗೆ ಮಾಡುವಾಗ ದೇವರು ಕೊಟ್ಟಿರುವ ಸರ್ವಾಯುಧಗಳನ್ನು ಧರಿಸಿ ಈ ಕಠಿಣ ಯುದ್ಧಕಾಲದಲ್ಲಿ ಜಯಶಾಲಿಯಾಗಿ ನಿಲ್ಲಬೇಕು-Z ’03, 121 R3180

