21 ಏಪ್ರಿಲ್ರ ದೈನಂದಿನ ಭಕ್ತಿಚಿಂತನೆ
ಯಾಕಂದರೆ, ನಮಗಿರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ. ಆದುದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ. ಇಬ್ರಿಯರಿಗೆ 4:15, 16
ಶೋಧನೆಯ ಕ್ಷಣದಲ್ಲಿ, ಹೃದಯದ ಭಾವನೆಗಳು ಕುಂದಿಹೋಗದೆ, ದೇವರ ಸನ್ನಿಧಿಗೆ ಸೇರುವದಕ್ಕೆ ಮೇಲೆ ಮೇಲೆ ಏರುವಂತಾಗಬೇಕು ಹಾಗೆ ಉಚ್ಛಮಟ್ಟ ತಲುಪಲು ಪೂರ್ಣ ನಂಬಿಕೆಯೇ ಆಧಾರ. ಇದರಲ್ಲಿ ದೇವರ ಪ್ರೀತಿ, ಜ್ಞಾನ, ಸಮಯೋಜಿತ ಸಹಾಯ ದೊರೆಯುವಂತೆ ಯಾರಾರು ದೇವರಲ್ಲಿ ಹೆಚ್ಚಿನ ಪ್ರೀತಿ ತೋರಿಸುತ್ತಾರೋ, ಅವರಿಗೆ ದೇವರಿಂದ ಹಿತ ಸಂಯೋಜನೆ ಇವುಗಳ ಮಾನ್ಯತೆ ಮಾಡುವವರಂತೆ ಆಗಬೇಕು. ಇಂಥಹ ಸಂದಿಗ್ಧ ಪರಿಸ್ಥಿತಿಗಳಲ್ಲಿ ಸಹಾಯಕ್ಕಾಗಿ ಯಾಚಿಸುವಾಗ ನಮ್ಮನ್ನು ದೇವರ ಬಳಿಗೆ ಸೆಳೆದು, ಆತನ ಆಲೋಚನೆ ಸಹಾಯ ನೀತಿಗಾಗಿ ಬಲ, ಸತ್ಯ, ಶುದ್ಧತೆ ಮತ್ತು ಪ್ರೀತಿ ಇವುಗಳು ನಮ್ಮ ಸನಿಹಕ್ಕೆ ಬಂದು ಶೋಧನೆಗಳ ಮೇಲೆ ಜಯಭೇರಿ ಕ್ಷಣ ಕ್ಷಣದಲ್ಲೂ, ದಿನ ನಿತ್ಯದಲ್ಲೂ ಮತ್ತು ಅಂತಿಮವಾಗಿ ವಿಜಯೋತ್ಸಾಹಗಳಲ್ಲಿ ಲೀನಗೊಳ್ಳುತ್ತವೆ-Z ’98, 23 (R2248). R2249

