9 ಏಪ್ರಿಲ್ರ ದೈನಂದಿನ ಭಕ್ತಿಚಿಂತನೆ
ರಂಗಸ್ಥಾನದಲ್ಲಿ ಓಡುವದಕ್ಕೆ ಗೊತ್ತಾದವರೆಲ್ಲರೂ ಓಡುತ್ತಾರಾದರೂ ಒಬ್ಬನು ಮಾತ್ರ ಬಿರುದನ್ನು ಹೊಂದುತ್ತಾನೆ ಎಂಬದು ನಿಮಗೆ ತಿಳಿಯದೋ, ಅವರಂತೆ ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ. ೧ ಕೊರಿಂಥದವರಿಗೆ 9:24
ಯುದ್ಧದಲ್ಲಿ ಜಯಪಡೆಯಬೇಕಾದರೆ, ನಾವು ದೇವರು ದಯಪಾಲಿಸಿದ ಸರ್ವಾಯುಧಗಳನ್ನು ಧರಿಸಿಕೊಳ್ಳುವದಲ್ಲದೆ, ಶೂರರಾಗಿ ಕದನದಲ್ಲಿ ಆಕ್ರಮಣಶೀಲರಾಗಿ, ಕಣ್ಣಿನಾಶೆ, ಶರೀರದಾಶೆ, ಬದುಕು ಬಾಳಿನ ಡಂಭ ಹಾಗೂ ನೀತಿ ಮತ್ತು ಪರಿಶುದ್ಧತೆಯ ವಿರೋಧವಾಗಿರುವವುಗಳ ಮೇಲೆ ಹೋರಾಡುವವರಾಗಬೇಕು. ಪ್ರೀತಿ ಅಂದರೆ, ಕರ್ತನಲ್ಲಿ, ಸತ್ಯದ ಮೇಲೆ, ನೀತಿಯ ಪರವಾಗಿ ವಿಶ್ವಾಸವಿಡಬೇಕು. ಇವುಗಳೇ ನಮ್ಮನ್ನು ಹುರಿದುಂಬಿಸುವವು. ಹಾಗೆ ಇವುಗಳಿಂದ ನಾವು ಸ್ಪೂರ್ತಿಪಡೆಯದೇ ಇದ್ದಲ್ಲಿ, ನಾವು ವಿಜಯಿಗಳಾಗುವದೇ ಅಸಾಧ್ಯವಾಗುತ್ತದೆ. ಪ್ರೀತಿಯೊಂದರಿಂದಲೇ ನಾವು ಮರಣದ ಪರ್ಯಂತರ ನಂಬಿಗಸ್ತರಾಗಿ ಉಳಿಯಬಲ್ಲೆವು ಮತ್ತು ದೇವಜನರ ಬಾಧ್ಯತೆಯಲ್ಲಿ ಪಾಲುಗಾರರಾಗುತ್ತೇವೆ. ಎಲ್ಲ ಉತ್ಸಾಹವುಳ್ಳ ಪ್ರೀತಿ, ಹೃದಯಗಳಲ್ಲಿ ದೊರೆತನ ಮಾಡುವದೇ ಆದರೆ, ಅಂಥಹವರು ತಮ್ಮ ಹೃದಯಗಳನ್ನು ಪೂರ್ಣವಾಗಿ ಕರ್ತನಿಗೆ ಒಪ್ಪಿಸಿಕೊಟ್ಟು ಅಂದರೆ, ಹತ್ತನೇ ಒಂಭತ್ತು ಭಾಗದಷ್ಟು ಗೆಲುವು ಸಾಧಿಸಿರುತ್ತಾರೆ. ಇಷ್ಟೆಲ್ಲಾ ಆದರೂ ಸಹ ನಾವು ನಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಬೇಕು. (ಯೂದ 21) ಅಪೋಸ್ತಲನು ಹೇಳುವ ಹಾಗೆ ನಾವು ಎಚ್ಚರವಾಗಿದ್ದು ಆಗ್ರಹಪೂರ್ವಕವಾದ ಪ್ರಾರ್ಥನೆಯಲ್ಲಿ ನಿರತರಾಗಿರಬೇಕು-Z ’95, 93 (R1798) R1799

