21 ಡಿಸೆಂಬರ್ರ ದೈನಂದಿನ ಭಕ್ತಿಚಿಂತನೆ
ಯಾವನು ಯೋಗ್ಯನು? ಪ್ರಕಟನೆ 5:2
ಪ್ರಿಯ ಸಹೋದರರೇ ದೇವರು ನಮ್ಮನ್ನು ಆತನ ಸುರಳಿಯಲ್ಲಿ ಅಡಕವಾಗಿರುವ ದೈವ ಯೋಜನೆಯನ್ನು ತಿಳಿಯಲಿಕ್ಕೆ ಯೋಗ್ಯರೆಂದು ಪರಿಗಣಿಸಿರುವದಕ್ಕಾಗಿ ಸಂತೋಷಪಡೋಣ. ಈ ಸುರುಳಿಗೆ ಹಾಕಿದ್ದ ಮುದ್ರೆಯನ್ನು ಯೂದ ಕುಲದ ಸಿಂಹವಾಗಿರುವ ನಮ್ಮ ಪ್ರಿಯ ಯೇಸು ಕರ್ತನು ಒಡೆದು ಹಾಕಿರುವದರಿಂದ, ಅದರಲ್ಲಿ ಅಡಕವಾಗಿರುವ ದೈವ ಯೋಜನೆಯನ್ನು ನಾವು ನೋಡುತ್ತಾ ಹಾಗೂ ಆತನ ಧರ್ಮಶಾಸ್ತ್ರವನ್ನು ತಿಳಿದುಕೊಳ್ಳಲು ನಾವು ಯೋಗ್ಯರೆಂದು ಪರಿಗಣಿಸಿರುವದಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ಅರ್ಪಿಸೋಣ ಮತ್ತು ಅದರಲ್ಲಿ ಅಡಕವಾಗಿರುವ ಎಲ್ಲದಕ್ಕೂ ನಾವು ವಿಧೇಯರಾಗಿಯೂ ಮತ್ತು ಪ್ರಾಮಾಣಿಕರಾಗಿಯೂ ನಡೆಯೋಣ. ದೈವ ಸತ್ಯವೆಂಬ ಬೆಳಕಿನಲ್ಲಿ ನಾವು ಸ್ವಲ್ಪ ಭಾಗವನ್ನಾದರೂ ಪ್ರಕಾಶಿಸುವಂತೆ ಮಾಡಲು ಕೊಟ್ಟಿರುವ ಅವಕಾಶವನ್ನು ಕಡೆಗಣಿಸದೆ, ನಾವು ಅಪರೂಪದ ಒಡವೆಗಳಂತೆಯೂ, ವಜ್ರದಂತೆಯೂ ದೇವರಿಗೆ ರುಜುಪಡಿಸುವವರಾಗಿ ಈ ಸಂಗತಿಗಳನ್ನು ಹೃದಯಪೂರ್ವಕವಾಗಿ ಅಂಗೀಕರಿಸಿ ಈ ಬೆಳಕನ್ನು ನಾವು ಇತರರಿಗೆ ಪ್ರಕಾಶಿಸುವಂತೆ ಮಾಡೋಣ, ಆ ಸ್ಥಿತಿಯಲ್ಲಿ ನಮಗೆ ಒದಗಿಬರುವ ಕಠಿಣಕರವಾದ ಕಷ್ಟಗಳನ್ನು ನಂಬಿಗಸ್ತರಾಗಿ ಸಹಿಸಿಕೊಂಡು ಮುಂದುವರಿಯೋಣ. ಸಂಭವಿಸುವ ಈ ಅಲ್ಪ ಕಷ್ಟಗಳನ್ನು ನಾವು ನಂಬಿಕೆಯಿಂದ ಸಹಿಸಿಕೊಳ್ಳುವವರಾದರೆ, ನಮ್ಮನ್ನು ದೇವರು ಕ್ರಿಸ್ತನ ರಾಜ್ಯದಲ್ಲಿ, ಕ್ರಿಸ್ತನೊಂದಿಗೆ ಮಹಿಮೆಯಲ್ಲಿ ಆಳ್ವಿಕೆ ಮಾಡಲು ಯೋಗ್ಯರಾಗಿದ್ದೇವೆ ಎಂದು ಪರಿಗಣಿಸುವನು-Z ’02, 333 (R3103). R3104

