8 ಡಿಸೆಂಬರ್ರ ದೈನಂದಿನ ಭಕ್ತಿಚಿಂತನೆ
ಲೋಕವು ನಿಮ್ಮ ಮೇಲೆ ದ್ವೇಷ ಮಾಡುವದಾದರೆ, ಅದು ಮೊದಲು ನನ್ನ ಮೇಲೆ ದ್ವೇಷ ಮಾಡಿತೆಂದು ತಿಳುಕೊಳ್ಳಿರಿ...... ಯೋಹಾನನು 15:18
ಲೋಕವು ನಿಷ್ಕಾರಣವಾಗಿ ನಮ್ಮ ಕರ್ತನನ್ನು ದ್ವೇಷಿಸಿದಂತೆ ನಮ್ಮ ವಿಷಯದಲ್ಲಿಯೂ ದ್ವೇಷಿಸುವದು ಹಾಗೂ ದ್ವೇಷ, ಅಸೂಯೆ, ವೈರತ್ವ ಮತ್ತು ಕೊಲೆಗೆ ಕಾರಣವಿಲ್ಲದಿದ್ದರೂ ನಮಗೆ ವಿರುದ್ಧವಾಗಿ ನಮ್ಮ ಮೇಲೆ ದ್ವೇಷ ಕಾರುವುದಾದರೆ ನಾವು ಆದಷ್ಟುಮಟ್ಟಿಗೆ ನಮ್ಮ ಜೀವನ ಶುದ್ಧವಾಗಿದೆ ಎಂತಲೂ, ನಮ್ಮ ಯೋಜನೆಗಳು, ನಮ್ಮ ಮಾತುಗಳು ಮತ್ತು ಕೃತಿಗಳ ಮೂಲಕ ನಮ್ಮ ಕರ್ತನ ನಾಮವನ್ನು ಕೊಂಡಾಡುವವರಾಗಿ, ಪ್ರೀತಿಯನ್ನು ಎಲ್ಲಾ ಮನುಷ್ಯರ ಮೇಲೆ ತೋರಿಸುತ್ತಾ ಅದರಲ್ಲೂ ಪ್ರಾಮುಖ್ಯವಾಗಿ ನಂಬಿಗಸ್ತ ಮನೆವಾರ್ತೆಯ ಸಹೋದರರ ಮೇಲೆ ತೋರಿಸುವವರಾಗಿದ್ದೇವೆ ಎಂಬದು ಖಚಿತವಾಗುವದು. ನೂತನ ಆಕಾಶಮಂಡಲ, ನೂತನ ಭೂ ಮಂಡಲ ಉದಯವಾದಾಗ, ಈಗ ಸೈತಾನನಿಂದ ಮಂಕು ಮಾಡಲ್ಪಟ್ಟು ಕುರುಡರಾಗಿದ್ದು ನಮ್ಮನ್ನು ದ್ವೇಷ ಮಾಡಿದವರು ದೇವರಿಂದ ಅಭಿಷೇಕಿಸಲ್ಪಟ್ಟವರ ಮುಂದೆ ಮೊಣಕಾಲೂರಿ ಅಡ್ಡಬೀಳುವರು. ಆಗ ನಾವು ಅವರನ್ನು ಮೇಲೆತ್ತಿ ಆಶೀರ್ವದಿಸಿ ಅವರನ್ನು ಪ್ರೋತ್ಸಾಹಪಡಿಸಿ ಅವರು ಕಳಕೊಂಡಿರುವ ದೇವರ ಸ್ವರೂಪ ಹಾಗೂ ಹೋಲಿಕೆಯನ್ನು ಪಡೆಯಲು ಅವರಿಗೆ ಸಹಾಯಮಾಡುತ್ತೇವೆ-Z ’01, 300 (R2880). R2881

