22 ಡಿಸೆಂಬರ್ರ ದೈನಂದಿನ ಭಕ್ತಿಚಿಂತನೆ
ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧ ಮಾಡಿಕೊಂಡರೆ ಅವನು ಉತ್ತಮವಾದ ಬಳಕೆಗೆ ಯೋಗ್ಯನಾಗಿರುವನು; ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ, ಯಜಮಾನನಿಗೆ ಉಪಯುಕ್ತನಾಗಿಯೂ, ಸಕಲ ಸತ್ಕ್ರಿಯೆಗಳನ್ನು ಮಾಡುವದಕ್ಕೆ ಸಿದ್ಧನಾಗಿಯೂ ಇರುವನು. ೨ ತಿಮೊಥೆಯನಿಗೆ 2:21
ಯಾವನಾದರೂ ದೇವರಿಂದ ಮಾನ ಹೊಂದಬೇಕಾದರೆ, ಅದಕ್ಕೆ ದೇವರು ನೇಮಕ ಮಾಡಿರುವ ರೀತಿಯಿಂದಲೇ ಪಡೆಯಬೇಕು. ಅಂದರೆ, ಅವನು ದೀನ ಮನಸ್ಸುಳ್ಳವನಾಗಿ ನಡೆಯಬೇಕು. ಯಾಕಂದರೆ, ಕರ್ತನು ದೀನ ಮನಸ್ಸುಳ್ಳವರನ್ನು ಕಟಾಕ್ಷಿಸುತ್ತಾನೆ. ಹೀಗಿರುವಲ್ಲಿ ನೀನು ದೇವರ ಸೇವೆಗೆ ಮಾನವುಳ್ಳ ಮತ್ತು ಉಪಯುಕ್ತಕರವಾದ ಪಾತ್ರೆಯಾಗಬೇಕಾದರೆ, “ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ. ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು. ಈ ವಿಷಯದಲ್ಲಿ ನೀನು ಆತುರಪಡಬೇಡ. ಆದರೆ, “ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು”. ಅದನ್ನು ಪ್ರಾರಂಭಿಸಿ ಮುಂದುವರಿಸುತ್ತಾ ನಿನ್ನನ್ನು ನೀನು ಶುದ್ಧಿಪಡಿಸಿಕೊಂಡರೆ, ದೇವರ ಸೇವೆ ಮಾಡಲು ಯೋಗ್ಯನಾಗುವಿ-Z ’02, 319 (R3096). R3097

