1 ಡಿಸೆಂಬರ್ರ ದೈನಂದಿನ ಭಕ್ತಿಚಿಂತನೆ
ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು. ಮತ್ತಾಯನು 22:39
ನಿನ್ನ ನೆರೆಯವನು ತನ್ನ ಬುದ್ಧಿ ಮತ್ತು ನಾಲಿಗೆಯನ್ನು ನಿನ್ನ ವಿರುದ್ಧವಾಗಿ ಆರೋಪಿಸುವದಕ್ಕೆ, ಕೆಟ್ಟ ಕೆಟ್ಟ ಮಾತುಗಳನ್ನಾಡುವದಕ್ಕೆ ಮತ್ತು ನಿನ್ನನ್ನು ನಿಂದಿಸಲಿಕ್ಕೆ ಉಪಯೋಗಿಸಬಾರದು ಎಂಬದಾಗಿ ನೀನು ಇಷ್ಟಪಡುವುದು ಸಹಜ. ಅದರಂತೆಯೇ ನೀನೂ ಸಹ ನಿನ್ನ ನೆರೆಯವನನ್ನು ನಿಂದಿಸಬಾರದು. ಕರ್ತನ ಆಜ್ಞೆ ಏನೆಂದರೆ, ಆತನ ಒಡಂಬಡಿಕೆಯ ಅಡಿಯಲ್ಲಿ ಬರುವ ಎಲ್ಲರೂ ತನ್ನ ನೆರೆಯವನ ಬಗ್ಗೆ ಅನುಮಾನಪಟ್ಟು ನಿಂದಿಸಬಾರದು. ಆಧಾರವಿಲ್ಲದ ಅನುಮಾನ ಆತನ ತಿಳುವಳಿಕೆಯನ್ನು ಮೀರಿ ಸಾಂದರ್ಭಿಕ ವಿಷಯಗಳ ಮೂಲಕ ಅವನಿಗೆ ತಿಳಿದುಬಂದರೂ ತನ್ನಲ್ಲಿರುವ ನೂತನ ಮನಸ್ಸು ಅದರ ಉದಾರ ಮನೋಭಾವದಿಂದಾಗಿ ಆ ಅನುಮಾನ ತಪ್ಪಾಗಿ ಅಥವ ಸರಿಯಾಗಿ ಕೇಳಿಸಿಕೊಳ್ಳಲಾರದೆ ಹೋಗಿರುವದರಿಂದಲೂ ನಿನ್ನ ನೆರೆಯವನಿಗೆ ಈ ವಿಷಯದ ಬಗ್ಗೆ ಅನುಮಾನಪಡುವ ಅವಕಾಶವನ್ನು ಕೊಡಬೇಕು-Z ’99 72 (R2442). R2445

