7 ಡಿಸೆಂಬರ್ರ ದೈನಂದಿನ ಭಕ್ತಿಚಿಂತನೆ
ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ. ೧ ಪೇತ್ರನು 2:23
ಯೇಸು ಕ್ರಿಸ್ತನ ವೈರಿಗಳು ಆತನಲ್ಲಿ ತಪ್ಪು ಕಂಡುಹಿಡಿಯಲು ಪ್ರಯತ್ನಿಸಿದರು ಹಾಗೂ ಆತನನ್ನು ಬೈಯುವುದಕ್ಕೂ ಮತ್ತು ಆತನ ವಿರುದ್ಧವಾಗಿ ಕೆಟ್ಟ ಮಾತುಗಳನ್ನಾಡಲು ಕಾಯುತ್ತಿದ್ದರು. ಕೆಲವು ವೇಳೆ ಆತನ ವೈರಿಗಳು ಸಾಧಿಸಬಹುದು ಎಂಬ ಅಭಿಪ್ರಾಯದ ಸನಿಹದಲ್ಲಿರುವವರಾಗಿದ್ದರು. ಆದರೂ ಕ್ರಿಸ್ತನು ಪ್ರತಿಯಾಗಿ ಅವರನ್ನು ಬೈಯದೆ ಮತ್ತು ಅವರ ವಿರುದ್ಧವಾಗಿ ಕೆಟ್ಟ ಮಾತನ್ನಾಡದೆ ಸುಮ್ಮನಿದ್ದನು ಎನ್ನುವದು ಸರಿಯಲ್ಲ. ಏಕೆಂದರೆ, ಆತನು ದೈವ ಚಿತ್ತಕ್ಕೆ ಸಂಪೂರ್ಣವಾಗಿ ಶರಣಾಗತನಾದುದರಿಂದ, ಜನರಿಂದ ಬಂದ ಕೆಟ್ಟ ನಿಂದನೆ, ಬೈಗಳನ್ನು ದೀನ ಸ್ವಭಾವವುಳ್ಳವನಾಗಿ, ಶಾಂತ ಚಿತ್ತದಿಂದ ಅವುಗಳನ್ನು ಸಹಿಸಿಕೊಂಡನು. ಈ ಕಾರಣಕ್ಕಾಗಿಯೇ ಆತನು ಕರೆಯಲ್ಪಟ್ಟವನಾಗಿದ್ದು, ಇವೆಲ್ಲವನ್ನು ಶಾಂತಚಿತ್ತದಿಂದ ಸಹಿಸಿಕೊಂಡು, ದೇವರಿಗೆ ನಂಬಿಗಸ್ತನಾಗಿ ಶಿಕ್ಷಣ ಹೊಂದಿದವನಾಗಿ ರುಜುಪಡಿಸಿ ತನ್ನಲ್ಲಿರುವ ದೈವಿಕ ಗುಣಗಳನ್ನು ಅಭಿವೃದ್ಧಿಪಡಿಸಿಕೊಂಡು, ಆ ಮುಖಾಂತರ ಈ ಎಲ್ಲಾ ಗುಣಗಳಿಂದ ಜನರ ಕುರುಡುತನ ಮತ್ತು ಅವರ ಅಜ್ಞಾನದ ನಿಮಿತ್ತ ಅವರಲ್ಲಿ ಸಹಾನುಭೂತಿಯುಳ್ಳವನಾಗಿ ಅವರಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದನು-Z ’01, 298 (R2877). R2879

