29 ಡಿಸೆಂಬರ್ರ ದೈನಂದಿನ ಭಕ್ತಿಚಿಂತನೆ
ಮುಂಜಾನೆ ಬೀಜ ಬಿತ್ತು, ಸಂಜೆಯ ತನಕ ಕೈದೆಗೆಯಬೇಡ, ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡು ಚೆನ್ನಾಗುವವೋ? ನಿನಗೆ ತಿಳಿಯದು. ಪ್ರಸಂಗಿ 11:6
ಎಲ್ಲಾ ಕರ್ತನ ಜನರು, ಸತ್ಯದ ಸೇವಕರಾಗುವದಕ್ಕೆ ಯಾವ ಪ್ರಮಾಣದಲ್ಲಿ ಇಷ್ಟವುಳ್ಳವರಾಗಿರುವರೋ, ಅದೇ ಪ್ರಮಾಣದಲ್ಲಿ ಅವರು ಸದಾ ಎಚ್ಚರಿಕೆಯಿಂದಿದ್ದು, ಸತ್ಯದ ಪರವಾಗಿ ಸೇವೆ ಮಾಡುವ ಅವಕಾಶಗಳನ್ನು ನಿರೀಕ್ಷಿಸುವವರಾಗಿ ಕರ್ತನ ನಡೆಸುವಿಕೆ ಹಾಗೂ ಆತನು ತಮ್ಮನ್ನು ಉಪಯೋಗಿಸಿಕೊಳ್ಳಲು ಕಾತುರರಾಗಿ ಕಾಯಬೇಕು. ನಾವು ದೇವರ ಬಗ್ಗೆ ಭಕ್ತಿಯನ್ನು ಹಾಗೂ ಆತನ ವಾಕ್ಯವನ್ನು ತಿಳಿಯಲು ಕಾತುರರಾಗಿರುವವರನ್ನು ನೋಡಿದಲ್ಲಿ, ಅವರಿಗೆ ನಾವು ಹಸ್ತ ಚಾಚಿ ಸಹಾಯ ನೀಡಬೇಕು. ಹಾಗೆಯೇ, ನಮಗೆ ದೊರಕಿರುವ ಆಶೀರ್ವಾದವನ್ನು ಅವರಿಗೂ ವರ್ಗಾವಣೆ ಮಾಡಲು ಕಾತುರರಾಗಿದ್ದು, ಕರ್ತನಿಗಾಗಿ ಪ್ರತಿಷ್ಠೆಪಡಿಸಿಕೊಂಡಿರುವ ನಾವು, ಇದು ನಮ್ಮ ಮುಖ್ಯ ವ್ಯವಹಾರವೆಂದು ಎಣಿಸಿ ನಮ್ಮನ್ನು ನಾವು ರಾಜಾಧಿರಾಜನ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು-Z ’02, 71 (R2964). R2965

