6 ಡಿಸೆಂಬರ್ರ ದೈನಂದಿನ ಭಕ್ತಿಚಿಂತನೆ
ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು, ಗೋಡೆ ಬಿದ್ದ ಹಾಳೂರಿಗೆ ಸಮಾನ..... ಙ್ಞಾನೋಕ್ತಿಗಳು 25:28
ನಮ್ಮ ಸ್ವಾರ್ಥದ ವಿರುದ್ಧ ಹೋರಾಡುವದು ಒಂದು ಮಹತ್ತರವಾದ ಹೋರಾಟವಾಗಿದೆ. ಈ ಹೋರಾಟದ ವಿಷಯದಲ್ಲಿ ನಮಗೆ ಕರ್ತನು ಕೊಟ್ಟ ವಾಕ್ಯವೇನೆಂದರೆ, “ತನ್ನನ್ನು ಆಳುವವನು (ತನ್ನ ಮನಸ್ಸು ಅಥವಾ ಚಿತ್ತ) ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ” (ಜ್ಞಾನೋಕ್ತಿ 16:32). ಏಕೆಂದರೆ, ಅವನು ಈ ಹೋರಾಟದ ಬಗ್ಗೆ ತಿಳುವಳಿಕೆಯನ್ನು ಹೊಂದಿದವನಾಗಿ, ತನ್ನನ್ನು ಸರಿಯಾಗಿ ನಿಯಂತ್ರಿಸಿಕೊಳ್ಳುವ ಹೋರಾಟ ಮಾಡುವನು. ಹೀಗೆ ತನ್ನಲ್ಲಿರುವ ಸ್ವಾರ್ಥತೆ ಮತ್ತು ಪಾಪದ ವಿರುದ್ಧ ಹೋರಾಟ ಮಾಡುತ್ತಾ ಅನುಭವವನ್ನು ಪಡೆದ ಮೇಲೆ ತನ್ನ ಕಣ್ಣಲ್ಲಿರುವ ತೊಲೆಯನ್ನು ತೆಗೆಯಲು ಶಕ್ತನಾಗುವನು. ಅಂದರೆ, ಶರೀರದಲ್ಲಿನ ಕೋಪ, ಹೊಟ್ಟೆಕಿಚ್ಚು, ದ್ವೇಷ, ಅಸೂಯೆಯನ್ನು ಸ್ವಾಧೀನದಲ್ಲಿಟ್ಟವನು ಇಂತಹ ಕಠಿಣವಾದ ಯುದ್ಧದಿಂದ ಅನುಭವವನ್ನು ಪಡೆದವನಾಗಿದ್ದಾನೆ. ಸಹೋದರರಿಗೆ ಸಹಾಯ ಮಾಡಲು ಸಿದ್ಧನಾಗಿರುವವನು, ತನ್ನ ನೆರೆಯವರಿಗೆ ಅವರ ಕಷ್ಟದಲ್ಲಿ ಸಹಾಯ ಮಾಡುತ್ತಾ, ಅವರಿಗೆ ಹತ್ತಿರುವ ಪಾಪ ಮತ್ತು ಬಲಹೀನತೆಯಿಂದ ಅವರನ್ನು ಪಾರು ಮಾಡುವ ಸಾಧ್ಯತೆಯನ್ನು ಹೊಂದುತ್ತಾನೆ-Z ’01 295 (R2877). R2878

