28 ಡಿಸೆಂಬರ್ರ ದೈನಂದಿನ ಭಕ್ತಿಚಿಂತನೆ
(ಒಡೆಯನು) ದಾರಿಯಲ್ಲಿ ಹಳ್ಳದ ನೀರು ಕುಡಿದು ತಲೆ ಎತ್ತುವನು. ಕೀರ್ತನೆಗಳು 110:7
ನಮ್ಮ ಕರ್ತನೂ, ನಾಯಕನೂ, ಗುರುವೂ ಆಗಿರುವಾತನನ್ನು ನಾವು ಬೇಡವುದೇನಂದರೆ, ನಮ್ಮನ್ನು ಹೆಚ್ಚು ಹೆಚ್ಚಾಗಿ ಆಶೀರ್ವದಿಸಿ, ನಾವು ನಂಬಿಗಸ್ತರಾಗಿ ಹೊಸ ಹುರುಪಿನಿಂದ ಸಂತೋಷವುಳ್ಳವರಾಗಿ ಕರ್ತನ ಅನುಭವಗಳಿಂದ ತುಂಬಿದ ಹಳ್ಳದ ನೀರನ್ನು ಕುಡಿದು, ಜ್ಞಾನವನ್ನು ಪಡೆದವರಾಗಿ ನಾವು ಇದರಿಂದ ಆತನ ಸೇವೆ ಮಾಡಲು ತಯಾರಾಗಿ, ಸಮರ್ಥರಾಗಿ ಬರಬರುತ್ತಾ ಇನ್ನೂ ಹೆಚ್ಚಾಗಿ ಸೇವೆ ಸಲ್ಲಿಸಲು ನಮ್ಮನ್ನು ಸಿದ್ಧರನ್ನಾಗಿ ಮಾಡಲು, ಈಗಿನ ಕಾಲದಲ್ಲೂ ಸೇವೆ ಮಾಡುವದಲ್ಲದೆ, ಆತನ ಕೃಪೆಯ ದೆಸೆಯಿಂದ ನಮಗೆ ಸಂಭವಿಸುವ ಪರೀಕ್ಷಾ ಸಂದರ್ಭಗಳು ಹಾಗೂ ನಮ್ಮ ಜೀವಿತದಲ್ಲಾಗುವ ದೈವ ಘಟಿತ ಬದಲಾವಣೆಗಳ ಬಗ್ಗೆ ನಾವು ನಮ್ಮ ದೇಹದಿಂದಲೂ, ಆತ್ಮದಿಂದಲೂ ನಮ್ಮ ಕರ್ತನನ್ನು ಮಹಿಮೆಪಡಿಸೋಣ. ಯಾಕಂದರೆ, ಸಮಸ್ತವೂ ಆತನದೆ ಆಗಿದೆ. ನಾವು ನಮ್ಮ ಕರ್ತನ ಅನುಭವಗಳೆಂಬ ತೊರೆಗಳಲ್ಲಿ ಪಾನ ಮಾಡುವಾಗ, ಚಿಕ್ಕ ಚಿಕ್ಕ ಹಕ್ಕಿಗಳು ನೀರು ಕುಡಿಯುವಾಗ ಪದೇ ಪದೇ ತಮ್ಮ ತಲೆಯನ್ನು ಮೇಲಕ್ಕೆತ್ತಿ ದೇವರಿಗೆ ಕೃತಜ್ಞತೆಗಳನ್ನು ಅರ್ಪಿಸುವಂತೆ, ಈ ಪಾಠವನ್ನು ಕಲಿತು ನಮಗೆ ಸಂಭವಿಸುವ ಎಲ್ಲಾ ಪರೀಕ್ಷೆಗಳು ನಮ್ಮ ಆತ್ಮೀಯ ಅಭಿವೃದ್ಧಿಗಾಗಿ ಸಂಭವಿಸುತ್ತವೆ ಎಂಬುದಾಗಿ ಪರಿಗಣಿಸಿ, ನಾವು ನಮ್ಮ ನಮ್ಮ ತಲೆಗಳನ್ನು ಮೇಲಕ್ಕೆತ್ತಿ ದೇವರನ್ನು ಕೊಂಡಾಡೋಣ-Z ’02, 14 (R2935). R2936

