30 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು. ಮತ್ತಾಯನು 28:20
ಬಿತ್ತನೆ ಕೆಲಸ ಮಾಡಿದಂಥ ನಮ್ಮ ಕರ್ತನು ಸುಗ್ಗಿಯ ಕೆಲಸವನ್ನು ಆಸಕ್ತಿಯಿಂದಲೂ, ಎಚ್ಚರಿಕೆಯಿಂದಲೂ, ನಿಜವಾಗಿಯೂ ಮಾಡುವನು. ಹೀಗಿರುವಲ್ಲಿ ಸತ್ಯವೆಂಬ ಕುಡುಗೋಲನ್ನು ಶಕ್ತಿಯಿಂದಲೂ, ಧೈರ್ಯದಿಂದಲೂ ನಾವು ಕರ್ತನ ಸೇವೆಯನ್ನು ಮಾಡುತ್ತಿದ್ದೇವೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡು, ನಾವು ಸುಗ್ಗಿಗೆ ಜವಾಬ್ದಾರರಲ್ಲ. ಆದರೆ, ನಾವು ಕೇವಲ ನಮ್ಮ ಶಕ್ತಿಗಾಗಿ ನಮಗೆ ಗೋಚರವಾಗುವ ಗೋಧಿಕಾಳನ್ನು ಕೂಡಿಸುವವರು ಎಂಬುದನ್ನು ಕೂಡ ಜ್ಞಾಪಕದಲ್ಲಿಟ್ಟುಕೊಳ್ಳೋಣ. ಮಾಗಿದ ಗೋಧಿಕಾಳುಗಳು ಸ್ವಲ್ಪವೇ ಆಗಿದ್ದು ಅವುಗಳನ್ನು ಕೂಡಿಸಲು ನಾವು ಹೆಚ್ಚು ಶ್ರಮಪಟ್ಟರೂ ಈ ಶ್ರಮದಿಂದ ಕೂಡಿಸುವ ಗೋಧಿ ಕಾಳಿಗಾಗಿ ಸಂತೋಷಪಡೋಣ. ಅಲ್ಲದೆ, ಅವುಗಳು ಅಪರೂಪ ಹಾಗೂ ವಿರಳವಾಗಿ ದೊರಕುವಂಥವುಗಳೆಂದು ಅವುಗಳನ್ನು ಮೆಚ್ಚಿ ಪ್ರೀತಿಯಿಂದ ಈ ಕೂಡಿಸುವ ಕಾರ್ಯವನ್ನು ಮಾಡೋಣ. ನಾವು ನಮ್ಮ ಎಲ್ಲಾ ಜ್ಞಾನ ವಿವೇಕವನ್ನು ಈ ಸೇವೆಯಲ್ಲಿ ವಿನಿಯೋಗಿಸುವಾಗ, ಕರ್ತನು ತನ್ನ ಈ ಕಾರ್ಯಮಾಡುವ ನಮಗೆ ಅನುಗ್ರಹಿಸುವ ಆಶೀರ್ವಾದದ ಮುಂದೆ ನಾವು ಮಾಡುವ ಶ್ರಮ ಏನೂ ಇಲ್ಲ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು-Z ’01, 155 (R2808). R2811

