10 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಪ್ರೀತಿ. . . . .ಅನ್ಯಾಯವನ್ನು ನೋಡಿ ಸಂತೋಷಪಡದೆ, ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ. ೧ ಕೊರಿಂಥದವರಿಗೆ 13:6
ನನ್ನ ಮನಸ್ಸಿನಲ್ಲಿ ಸರಿ-ತಪ್ಪು ಎಂಬುದು ಭದ್ರವಾಗಿ ಬೇರೂರಿದೆಯೇ? ನಾನು ಸಂಪೂರ್ಣವಾಗಿ ಸರಿಯಾದ ಪಕ್ಷದೆಡೆಗೆ ಇದ್ದು, ತಪ್ಪನ್ನು ವಿರೋಧಿಸುತ್ತಿದ್ದೇನೆಯೇ? ನಾನು ತಪ್ಪನ್ನು ಮಾಡಲು ಉತ್ತೇಜನ ಕೊಡದೆ, ಅದರಿಂದ ನನಗೆ ಅನುಕೂಲವಾಗುವ ಹಾಗೆ ಕಂಡರೂ, ಅದನ್ನು ಖಂಡಿಸುವವನಾಗಿರುವೆನಾ? ನಾನು ಸರಿಯಾದ ಪಕ್ಷದೆಡೆಗೆ ಅಂದರೆ, ಸತ್ಯಪರನಾಗಿದ್ದು, ಅದರ ಅಭ್ಯುದಯಕ್ಕೆ ಪ್ರಯತ್ನಿಸುತ್ತಾ ಆನಂದಪಡುತ್ತಿದ್ದೇನೆಯೇ? ಈ ಪ್ರಯತ್ನದಿಂದ ನನ್ನ ಹಿಂದಿನ ಅಭಿಪ್ರಾಯಗಳು ಅಥವಾ ಈಗಿನ ಇಹಲೋಕಕ್ಕೆ ಸಂಬಂಧಿಸಿದ ಹಿತಗಳಿಂದಾಗುವ ಅನುಕೂಲಗಳನ್ನು ಕಳಕೊಳ್ಳಲಿಕ್ಕಾದರೂ ನಾನು ಸತ್ಯವನ್ನು ಪ್ರೀತಿಸುತ್ತಿರುವೆನೇ? ಇಲ್ಲಿ ಅಪೋಸ್ತಲನು ಉಲ್ಲೇಖಿಸಿರುವ ದೇವರ ಪ್ರೀತಿ ಅಂದರೆ, ದೇವ ಜನರಲ್ಲಿರುವ ಪ್ರೀತಿ ಎಂಬುದೇ. ಈ ಪ್ರೀತಿಯು ಸ್ವಾರ್ಥತೆಯನ್ನು ಮೀರಿರುವಂಥದ್ದು ಹಾಗೂ ಭದ್ರವಾದ ತತ್ವಗಳಿಗೆ ಅಂಟಿಕೊಂಡಿರುವಂಥದ್ದು. ಇದನ್ನು ದಿನೇ ದಿನೇ ಸ್ಪಷ್ಟವಾಗಿ ತಿಳಿದುಕೊಂಡು ಇದರಿಂದ ಸತ್ಯಕ್ಕೆ ಅಧೀನರಾಗಿದ್ದು, ಏನೇ ಬಂದರೂ ಅದನ್ನು (ಪ್ರೀತಿ) ಬಿಡದೆ ಪರಿಪಾಲಿಸತಕ್ಕದ್ದು-Z ’03, 57 (R3150). R3151

