23 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆ ಬೇಕು. ಇಬ್ರಿಯರಿಗೆ 10:36
ಇಲ್ಲಿ ನಾವು ದೇವರ ಚಿತ್ತವನ್ನ ನೆರವೇರಿಸುವುದೇ ಒಂದು ಪರೀಕ್ಷೆಯಲ್ಲ. ಆ ಗುರಿಯನ್ನು ತಲುಪಿದ ಮೇಲೆ ಅಂದರೆ, ನಮ್ಮ ಹೃದಯ ಮತ್ತು ನಮ್ಮ ಚಿತ್ತದಲ್ಲಿ ಗುಣಮಟ್ಟವನ್ನು ಪಡೆದು ಆತನ ಚಿತ್ತವನ್ನು ಪೂರ್ಣವಾಗಿ ನೆರವೇರಿಸಲು ಸಾಧ್ಯವಿಲ್ಲದಿದ್ದರೂ ಶಾರೀರಿಕವಾಗಿ ಸ್ವಲ್ಪಮಟ್ಟಿಗೆ ನೆರವೇರಿಸಲು ಸಾಧ್ಯ. ನಾವು ತಾಳ್ಮೆಯಿಂದಿದ್ದು, ದೇವರ ನೀತಿಯನ್ನು ನಮ್ಮ ಹೃದಯದಲ್ಲಿ ಅಳವಡಿಸಿಕೊಂಡು ನಮ್ಮ ಜೀವನದ ಎಲ್ಲಾ ವ್ಯವಹಾರಗಳಲ್ಲಿ ಹಾಗೂ ಸಂದರ್ಭಗಳ ಸ್ಥಿತಿಗಳಲ್ಲಿ ದೇವರ ವಾಕ್ಯವೆಂಬ ನಿಯಮವನ್ನು ಪಾಲಿಸಿ ವಾಗ್ದಾನದ ಫಲಕ್ಕೋಸ್ಕರ ಕಾಯೋಣ. ಆಗ ಮಾತ್ರವೇ ನಾವು ಹೃದಯದಲ್ಲಿ ದೇವರ ರಾಜ್ಯಕ್ಕೆ ಬಾಧ್ಯರಾಗಲು ಸಮರ್ಥರಾಗುತ್ತೇವೆ. ಅಪೋಸ್ತಲನಾದ ಯಾಕೋಬನು ಹೇಳುವದೇನೆಂದರೆ, “ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆ.” ಅಂದರೆ, ನಮ್ಮ ನಂಬಿಕೆಗೆ ಪರಿಶೋಧನೆಯಾಗುವಾಗ ತಾಳ್ಮೆ ಎಂಬ ಗುಣವು ನಮ್ಮಲ್ಲಿ ನೆಲೆಯಾಗಿದ್ದು ನಾವು ದೀರ್ಘಶಾಂತಿಯಿಂದಿರಲು ಸಾಧ್ಯವಾಗುವುದು. ಆದರೆ, ನಾವು ತಾಳ್ಮೆಯಿಂದಿರಲು ಸಾಧ್ಯವಾಗದಿದ್ದರೆ ನಮ್ಮ ನಂಬಿಕೆಯು ಪರಿಶೋಧನೆ ಎಂಬ ಪರೀಕ್ಷೆಯಲ್ಲಿ ತೃಪ್ತಿದಾಯಕವಾಗಿ ನಿಲ್ಲಲು ಸಾಧ್ಯವಾಗುವದಿಲ್ಲ. ಆಗ ನಾವು ದೇವರ ರಾಜ್ಯಕ್ಕೆ ಬಾಧ್ಯರಾಗಲು ಸಾಧ್ಯವಿರುವದಿಲ್ಲ-Z ’01, 117 (R2790). R2792

