12 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ನಂಬದವನಾಗಿರಬೇಡ, ನಂಬುವವನಾಗು ಎಂದು ಹೇಳಿದನು. ಯೋಹಾನನು 20:27
ನಾವು ನಂಬಿಕೆ ಮತ್ತು ವಿಶ್ವಾಸವಿಲ್ಲದೆ, ದೇವರ ಬಳಿಗೆ ಬರಲು ಸಾಧ್ಯವಿಲ್ಲ. ನಾವು ಆತನ ಒಳ್ಳೆಯತನ, ಶಕ್ತಿ, ಜ್ಞಾನ ಮತ್ತು ಪ್ರೀತಿಯಲ್ಲಿ ವಿಶ್ವಾಸವಿಡಬೇಕು ಮತ್ತು ಆ ಮುಖಾಂತರ ನಾವು ಅಭಿವೃದ್ಧಿಯಾಗಲು ಅಭ್ಯಾಸಮಾಡಬೇಕು. ಈ ಅಪೋಸ್ತಲನು ಗಲಿಲಾಯ ಸಮುದ್ರದ ಮೇಲೆ ಬಿರುಗಾಳಿ ಬೀಸಿದಾಗ ಭಯಪಟ್ಟು ಕೂಗಿದನು - ನಂತರ ನಿಧಾನವಾಗಿ ನಂಬಿಕೆಯಲ್ಲಿ ಬಲಿಹೊಂದುತ್ತಾ, ದಾಖಲೆಗಳು ನಮಗೆ ತಿಳಿಸುವಂತೆ ಕರ್ತನು ಕಣ್ಣಿಗೆ ಕಾಣಿಸದೆ ಆತನನ್ನು ಅವನು ಕಂಡುಕೊಳ್ಳಲು ಸಾಧ್ಯವಿಲ್ಲದೆ ಇದ್ದಾಗ್ಯೂ, ಆತನನ್ನು ನಂಬಿದನು. ಹಾಗೆಯೇ, ನಾವು ಕರ್ತನಲ್ಲಿ ವಿಶ್ವಾಸವಿಡುವದಕ್ಕೆ ಇದು ಒಂದು ಪಾಠವಾಗಿದೆ; ಮತ್ತು ನಾವು ದಿನ ನಿತ್ಯವೂ ಕರ್ತನು ನಮ್ಮ ಕಣ್ಣಿಗೆ ಕಾಣಿಸದೆ ಇದ್ದಾಗ್ಯೂ ವಿಶ್ವಾಸವನ್ನು ಅಭ್ಯಾಸ ಮಾಡುತ್ತಾ ನಮಗೆ ಈ ಹಿಂದೆ ಆಗಿರುವ ಅನುಭವಗಳ ಬಗ್ಗೆ ಆಲೋಚಿಸಿ, ಚಿಂತಿಸಿ ಹಾಗೂ ದೇವರ ವಾಕ್ಯದಲ್ಲಿ ಇದರ ಬಗ್ಗೆ ಇರುವ ಪಾಠಗಳನ್ನು ನಮ್ಮ ಜೀವಮಾನದಲ್ಲಿ ಅಳವಡಿಸಿಕೊಂಡು ನಮ್ಮ ನಂಬಿಕೆಯು ನಮ್ಮಲ್ಲಿ ಬೇರೂರಿ ನಿಲ್ಲುವಂತೆ ಮಾಡಬೇಕಾಗಿದೆ-Z ’04, 89 (R3337). R3338

