14 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ. ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವವೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವದಿಲ್ಲ. ಇದಲ್ಲದೆ, ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಭೋದನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು. ಅಪೊಸ್ತಲರ ಕೃತ್ಯಗಳು 20:28-30
ಇಂಥಹ ವಿರುದ್ಧವಾದ, ಪ್ರತಿಕೂಲದ ಸ್ವಭಾವಗಳಿಗೆ ಕ್ರಿಸ್ತನ ಶಿಷ್ಯರು ಒಳಗಾಗುವದೂ ಮತ್ತು ಅವರು ದೇವರ ಸಭೆಯಾಗಿ ಇವುಗಳಿಂದ ಪರೀಕ್ಷಿಸಲ್ಪಟ್ಟು, ಸೋತು ಹೋಗದೆ ಜಯಶಾಲಿಗಳಾಗಿ ಹೊರಬಂದು ದೇವರು ವಾಗ್ದಾನ ಮಾಡಿರುವ ಮಹಾ ಬಹುಮಾನವನ್ನು ಪಡೆಯಬೇಕಾಗಿದೆ. ನಾವು ಕ್ರಿಸ್ತನೊಂದಿಗೆ ದೇವರ ರಾಜ್ಯದಲ್ಲಿ ಬಾದ್ಯಸ್ಥರಾಗಬೇಕಾದರೆ, ಈ ಎಲ್ಲಾ ರೀತಿಯ ಪರೀಕ್ಷೆಗಳು ಮತ್ತು ಶೋಧನೆಗಳಲ್ಲಿ ನಮ್ಮ ಪ್ರಾಮಾಣಿಕತೆಯನ್ನು ಹಾಗೂ ದೇವರಲ್ಲಿನ ನಂಬಿಕೆ ಮತ್ತು ಆತನ ರಾಜ್ಯದಲ್ಲಿ ನಂಬಿಕೆ, ಸತ್ಯದ ಮೇಲೆ ಅಭಿಮಾನ, ಹಿಂಸೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡು ಸಾವಿಗೂ ಹೆದರದೆ ಇರುವಂಥದನ್ನು ನಾವು ರುಜುಪಡಿಸಿ ನಮ್ಮ ಯೋಗ್ಯತೆಯನ್ನು ವ್ಯಕ್ತಪಡಿಸಬೇಕು. ದೇವರಲ್ಲಿ ನಮ್ಮ ವಿಶ್ವಾಸ ಚಂಚಲವಾಗಿರದೆ, ದೇವನು ತನ್ನ ಸಭೆಯನ್ನು ತಕ್ಕ ಸಮಯದಲ್ಲಿ ವಿಮೋಚಿಸಿ ಉನ್ನತ ಸ್ಥಾನಕ್ಕೇರಿಸುವನು ಎಂಬ ನಂಬಿಕೆ ದೃಢವಾಗಿರಬೇಕು. ಇಂತಹ ನಂಬಿಗಸ್ತರಿಗೆ ಅನುಗ್ರಹಿಸಲ್ಪಟ್ಟಿರುವ ಸಮಾಧಾನ ಕೀರ್ತನೆ 91ನೇ ಅಧ್ಯಾಯವಾಗಿದೆ-Z ’04, 74 R3331

