15 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಆತನಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಕ್ರಿಸ್ತನು ನಡೆದಂತೆಯೇ ತಾನೂ ನಡೆಯುವದಕ್ಕೆ ಬದ್ಧನಾಗಿದ್ದಾನೆ. ೧ ಯೋಹಾನನು 2:6
ಕ್ರಿಸ್ತನು ನಡೆದಂತೆ ನಡೆಯುವವನು ತನ್ನ ಸಾಮಾನ್ಯ ನಡತೆಯನ್ನು ಎಲ್ಲಾ ಒಳ್ಳೆಯತನಕ್ಕೆ ಸಂಬಂಧಿಸಿಕೊಂಡಿರಬೇಕು ಮತ್ತು ಅದರಂತೆಯೇ ಎಲ್ಲಾ ಕೆಟ್ಟತನವನ್ನು ದೂರವಿರಿಸಬೇಕು. ಆದಷ್ಟುಮಟ್ಟಿಗೆ ಅವನು ಕ್ರಿಸ್ತನ ಹೆಜ್ಜೆಯ ಜಾಡನ್ನು ಅನುಸರಿಸಿ ನಡೆಯಬೇಕು. ಈ ನಡೆಯುವಿಕೆ ತನ್ನ ಅಪರಿಪೂರ್ಣ ದೇಹದಲ್ಲಿ ಕ್ರಿಸ್ತನು ನಡೆದಂತೆ ನಡೆಯಬೇಕೆಂದು ತಿಳಿಯಬಾರದು. ಆ ರೀತಿಯಲ್ಲಿ ಪರಿಪೂರ್ಣ ಮಟ್ಟದಲ್ಲಿ ನಡೆಯಲು ಯಾರಿಗೂ ಸಾಧ್ಯವಿಲ್ಲ. ಕ್ರಿಸ್ತನು ಶರೀರದಲ್ಲಿ ಪರಿಪೂರ್ಣನಾಗಿದ್ದನು. ಹಾಗೆಯೇ ಪರಿಪೂರ್ಣಮಟ್ಟದಲ್ಲಿ ನಡೆದನು. ಇದರ ಸಾಧಾರಣ ಅರ್ಥ ಆತನು ನಡೆದಂತೆ ನಡೆಯುವದು ಅಂದರೆ, ಆತನು ನಡೆದ ದಾರಿ, ಅದೇ ಗುರಿ, ಆತನು ಪರಿಗಣಿಸಿ ಸ್ಥಾಪಿಸಿದ ಪ್ರಮಾಣದ ಗುರುತು ಹಿಡಿದು ಅದನ್ನು ಪಡೆಯಲು ನಡೆಯುವದಾಗಿದೆ-Z ’03, 345 (R3235). R3237

