22 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ. ಕೀರ್ತನೆಗಳು 69:9
ತಣ್ಣಗಿರುವ ಮತ್ತು ಅದರ ಬಗ್ಗೆ ಲೆಕ್ಕಾಚಾರ ಹಾಕುವ ಜನರಲ್ಲಿ ಒಳ್ಳೆಯ ಗುಣಗಳಿರಬಹುದು. ಆದರೆ ಒಮ್ಮೆ ಕರ್ತನ ಕೃಪೆಯನ್ನೂ, ಸತ್ಯವನ್ನೂ ರುಚಿ ನೋಡಿದವರು ತಣ್ಣಗಾಗಲಿ ಅಥವ ಉಗುರು ಬೆಚ್ಚಗಾಗಲಿ ಇರಲು ಸಾಧ್ಯವಿಲ್ಲ. ಇಂಥಹವರಲ್ಲಿ ಪ್ರೀತಿಯೆಂಬ ಜ್ವಾಲೆಯು ಉರಿದು ಬೆಂಕಿಯಂತೆ ದಹಿಸುವದು. ಇಂಥಹ ಗುಣ ನಮ್ಮ ಕರ್ತನಲ್ಲಿತ್ತು. ಈ ಕಾರಣಕ್ಕಾಗಿಯೇ ಈತನು ದೇವರಿಗೆ ಅತಿ ಪ್ರಿಯನಾಗಿದ್ದನು. ಹೀಗಿರುವಲ್ಲಿ ನಾವೆಲ್ಲರೂ ಕರ್ತನ ಪ್ರೀತಿಗೆ ಪಾತ್ರರಾಗಿ ಆತನ ದೃಷ್ಠಿಯಲ್ಲಿ ಸತ್ಯ ಹಾಗೂ ನೀತಿಯ ವಿಷಯದಲ್ಲಿ ನಮ್ಮ ಅಭಿಮಾನವು ಬೆಂಕಿಯಂತೆ ಕರ್ತನ ವೇದಿಕೆಯ ಮೇಲೆ ಸಮರ್ಪಿತವಾಗಲಿ. ಹೀಗೆ ಇವರು ಕರ್ತನ ಮೂಲಕ ದೇವರಿಗೆ ಮೆಚ್ಚಿಕೆಯಾಗಿಯೂ ಅತಿಪ್ರಿಯರಾಗಿಯೂ ಕಂಡುಬರುವರು-Z ’98, 112 (R2288). R2289

