5 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ದೇವರ ಮನೆಯ ಮೇಲೆ ಅಧಿಕಾರಿಯಾಗಿರುವ ಶ್ರೇಷ್ಠನಾದ ಯಾಜಕನು ನಮಗಿದ್ದಾನೆ....... ಪರಿಪೂರ್ಣವಾದ ನಂಬಿಕೆಯುಳ್ಳವರಾಗಿಯೂ, ಯಥಾರ್ಥ ಹೃದಯವುಳ್ಳವರಾಗಿಯೂ ದೇವರ ಬಳಿಗೆ ಬರೋಣ. ಇಬ್ರಿಯರಿಗೆ 10:21, 22
ನಮ್ಮಲ್ಲಿ ಒಳ್ಳೆಯ ಕಾರ್ಯವನ್ನು ಪ್ರಾರಂಭಿಸುವಾತನು ಚಂಚಲನಾಗುವದಿಲ್ಲ ಎಂಬದನ್ನು ಜ್ಞಾಪಕದಲ್ಲಿಡೋಣ. ನಮ್ಮ ಹೃದಯವು ಈಗಲೂ ಆತನಲ್ಲಿ ಹೊಂದಿಕೆಯಾಗಿರಬೇಕು. ಆತನು ಕೊಟ್ಟಂತ ಈಡು ಬಲಿಯಲ್ಲಿ ನಮ್ಮ ನಂಬಿಕೆಯು ಸ್ಪಷ್ಟವಾಗಿಯೂ, ದೃಢವಾಗಿಯೂ ಇರಬೇಕು. ನಮ್ಮ ಪ್ರತಿಷ್ಠೆಯು ಪೂರ್ಣವಾಗಿಯೂ, ತುಂಬಿದ್ದಾಗಿಯೂ ಇರಬೇಕು. ನಾವು ನಮ್ಮ ಚಿತ್ತವನ್ನು ಬಿಟ್ಟು ಆತನ ಚಿತ್ತದಂತೆ ನಮ್ಮ ಎಲ್ಲಾ ವ್ಯವಹಾರವನ್ನು ನಡೆಸಿಕೊಳ್ಳಬೇಕು. ಆಗ ನಾವು ಪೂರ್ಣ ಭರವಸವುಳ್ಳವರಾಗಿದ್ದುಕೊಂಡು ದೇವರು ಬದಲಾಗುವದಿಲ್ಲ ಎಂಬದಾಗಿ ಗ್ರಹಿಸಿ, ಆತನು ಮಾಡಿರುವ ವಾಗ್ದಾನಗಳು ಹಾಗೂ ಏರ್ಪಾಡುಗಳ ಜೊತೆಯಲ್ಲಿ ಇದ್ದುದೇ ಆದರೆ, ದೇವರ ಅನುಗ್ರಹ, ನಡೆಸುವಿಕೆ ಮತ್ತು ಆತನು ನಮಗಾಗಿ ಮಾಡುವಂಥ ಎಲ್ಲಾ ಕಾರ್ಯಗಳು ನಮ್ಮನ್ನು ಕಾಯುವದು. ಇದೇ ನಾವು ಕರ್ತನಲ್ಲಿಟ್ಟಿರುವ ಪೂರ್ಣ ಭರವಸೆಯುಳ್ಳ ನಂಬಿಕೆ ಮತ್ತು ವಿಶ್ವಾಸವಾಗಿರುತ್ತದೆ-Z ’00, 170 (R2642). R2643

