13 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ನೀವು ನಿಮ್ಮ ತಂದೆಯನ್ನು ಬೇಡಿಕೊಳ್ಳುವದಕ್ಕಿಂತ ಮುಂಚೆಯೇ ನಿಮಗೆ ಏನೇನು ಅಗತ್ಯವೆಂಬದು ಆತನಿಗೆ ತಿಳಿದದೆ. ಮತ್ತಾಯನು 6:8
ನಮ್ಮ ಮನವಿ, ನಮ್ಮ ಕೋರಿಕೆ, ನಾವು ಕರ್ತನಿಗೆ ಮೊರೆಯಿಡುವದು ಇವೆಲ್ಲವೂ ಯಾವಾಗಲೂ ನಮ್ಮ ಹೃದಯದ ಶುದ್ಧತೆಗಾಗಿ ಮತ್ತು ಆತನ ಆತ್ಮ ನಮ್ಮಲ್ಲಿ ಸಮೃದ್ಧಿಯಾಗಿರಲು ಮತ್ತು ನಮ್ಮ ಆತ್ಮೀಯ ಬೆಳವಣಿಗೆಗೂ, ಬಲಗೊಂಡು ಚೈತನ್ಯವಾಗಿರಲು ಬೇಕಾಗುವ ಆತ್ಮೀಯ ಆಹಾರಕ್ಕಾಗಿ ಆಗಿರಬೇಕು. ಪ್ರಾಕೃತ ವಿಷಯಗಳ ಬಗ್ಗೆ ಕ್ರೈಸ್ತರಾಗಿರುವ ನಮ್ಮ ಹಿತಕ್ಕೆ ಏನು ಬೇಕಾಗುವವೆಂಬುದನ್ನು ಕರ್ತನು ತಿಳಿದು ಅದನ್ನು ತಕ್ಕ ಸಮಯದಲ್ಲಿ ಒದಗಿಸುವನು. ಇದನ್ನು ಕರ್ತನ ತೀರ್ಮಾನಕ್ಕೆ ಬಿಡಬೇಕು. ನಮಗೆ ಸಿಕ್ಕದೆ ಇರುವ ವಿಷಯದಲ್ಲಿ ನಾವು ಕರ್ತನನ್ನು ಒತ್ತಾಯಪಡಿಸಬಾರದು. ಹಾಗೇನಾದರೂ ಮಾಡಿದರೆ, ನಾವು ಕರ್ತನಲ್ಲಿ ನಂಬಿಕೆ ಇಡುವವರಾಗಿರದೆ, ಅಪನಂಬಿಗಸ್ತರಾಗಿ ಕಂಡುಬರುವೆವು. ಇದನ್ನು ಕರ್ತನು ಮೆಚ್ಚುವದಿಲ್ಲ. ಇದು ನಮಗೆ ಕರ್ತನಲ್ಲಿ ವಿಶ್ವಾಸವಿಲ್ಲದಿರುವದನ್ನು ಸ್ಪಷ್ಟಪಡಿಸುತ್ತದೆ; ಮತ್ತು ನಾವು ಭಯಭ್ರಾಂತರಾಗಿ ಕರ್ತನು ನಮ್ಮನ್ನು ಸುಧಾರಿಸುತ್ತಿಲ್ಲ, ನಮ್ಮನ್ನು ಮರೆತಿದ್ದಾನೆ. ಅಥವಾ ನಿರ್ಲಕ್ಷಿಸುತ್ತಾ ಇದ್ದಾನೆ ಎಂತಲೂ ಆತನು ತಾನು ಮಾಡಿರುವ ವಾಗ್ದಾನವನ್ನು ಈಡೇರಿಸುತ್ತಿಲ್ಲ ಎಂಬುವ ಅನುಮಾನ ಹುಟ್ಟವದು-Z ’04, 90 (R3337). R3338

