28 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಆತನು ನೆಮ್ಮದಿಯನ್ನು ದಯಪಾಲಿಸಿದರೆ ತಪ್ಪು ಹೊರಿಸುವವರು ಯಾರು? ಯೋಬನು 34:29
ನಮಗೆ ನೆಮ್ಮದಿಯನ್ನು ದಯಪಾಲಿಸುವವರು ಯಾರು? ದೇವರಲ್ಲವೇ. ಸಮುದ್ರದ ಮೇಲೆ ಅಲೆಗಳು ಏಳುವಂತೆ ನಮ್ಮ ಜೀವನದಲ್ಲಿ ನಮ್ಮ ಆತ್ಮಕ್ಕೆ ವಿರುದ್ಧವಾಗಿ ಸಂಕಟಗಳು ಅಕಸ್ಮಿಕವಾಗಿ ಸಂಭವಿಸುವಾಗ ನಮ್ಮನ್ನು ಸಂತೈಸಿ ಹಾಗೂ ನೆಮ್ಮದಿಯನ್ನು ದಯಪಾಲಿಸುವವರು ಈ ದೇವರಲ್ಲದೆ ಮತ್ತಾರು? ಸಮುದ್ರ ಪ್ರಯಾಣದಲ್ಲಿ ಅಲೆಗಳೆದ್ದಾಗ ನಾವಿಕರಂತೆ ನಾವು ದೇವರಲ್ಲಿ ಮೊರೆ ಇಡುವಾಗ, ನಮಗೆ ಸಮಾಧಾನವನ್ನೂ, ನೆಮ್ಮದಿಯನ್ನೂ ಕೊಡುವಾತನು ದೇವರಲ್ಲವೇ? ಶಾಂತಿಯನ್ನು ಉತ್ತರವಾಗಿ ಪಡೆಯುವ ಆ ನಿವೇದನೆಯು ಯಾವುದು? ಪ್ರತಿಯೊಂದು ಸಂದರ್ಭಗಳಲ್ಲಿ ನಮಗೊದಗುವ ತೊಂದರೆಯಿಂದಾಗಿ ಅಲ್ಲ ಮತ್ತು ದೈವ ಚಿತ್ತ ಈ ರೀತಿಯಲ್ಲಿ ನಮಗೆ ನೆಮ್ಮದಿಯನ್ನು ಕೊಡುವಂಥದ್ದಲ್ಲ. ಅದರೆ, ಅದು ಒಂದು ಯಾವಾಗಲೂ ಒಂದು ಶ್ರೇಷ್ಠ ಮಾರ್ಗವಲ್ಲ. ಆದರೆ, ಒಂದು ವಿಶೇಷವಾದ ಮೊರೆಯಿದೆ, ಅದು ಎಂದೂ ವಿಫಲವಾಗುವದಿಲ್ಲ. ಈ ಮೊರೆಗೆ ಸಿಕ್ಕುವ ನೆಮ್ಮದಿಯಿಂದ ನಮ್ಮನ್ನು ಯಾರೂ ತಡೆಯಲಾರರು. ಆ ಮೊರೆ ಯಾವುದೆಂದರೆ, ದೇವರ ಚಿತ್ತಕ್ಕನುಸಾರವಾಗಿರುವ, ಸ್ವಾದಿಷ್ಟವಾದ, ನಂಬಿಕೆಯುಳ್ಳ, ಪ್ರೀತಿಯಿಂದಾಗಿರುವ ಪ್ರಾರ್ಥನೆಯಾಗಿದೆ-Z ’96, 259 R2058

