1 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಯೆಹೋವನೇ, ನನ್ನ ಬಾಯಿಗೆ ಕಾವಲಿರಿಸು; ನನ್ನ ತುಟಿಗಳೆಂಬ ಕದವನ್ನು ಕಾಯಿ. ಕೀರ್ತನೆಗಳು 141:3
ನಮ್ಮ ನಡತೆ, ಕ್ರಿಯೆ, ಮಾತುಗಳನ್ನು ಕಾಯುವವರಾಗಲಿ, ತಡೆಯುವವರಾಗಲಿ ಮತ್ತು ನಮ್ಮ ಮನಸ್ಸು ಯೋಚನೆಗಳನ್ನು ಕಾಯುವವರು ಅಥವ ನಿಯಂತ್ರಣಗೊಳಿಸುವವರಿಗೆ ಹೋಲಿಸಿದರೆ, ಅವರು ಅಲ್ಪರಾಗಿ ಕಾಣಬಹುದು. ಇಲ್ಲಿ ನಾವು ವಿಶೇಷವಾಗಿ ಎಚ್ಚರವಾಗಿರತಕ್ಕದ್ದು. “ಹೃದಯದಲ್ಲಿರುವದೇ ಬಾಯಲ್ಲಿ ಬರುವದು.” ಈ ಸಾಧಾರಣ ಸತ್ಯ ಹೊಸದಾಗಿ ಹುಟ್ಟಿರುವವರಲ್ಲಿರುವದು. ಇವರು ತಾವಾಡುವ ಮಾತುಗಳಲ್ಲಾಗಲಿ, ನಡತೆಯಲ್ಲಾಗಲಿ ಅಥವಾ ಭಾಷೆಯಲ್ಲಾಗಲಿ ಇತರರಿಗೆ ಮಾದರಿಯಾಗಿರಬೇಕು. ಇವರ ಹೃದಯದ ಭಾವನೆ ನ್ಯಾಯಬದ್ಧವಾಗಿದ್ದು, ಸರಿಯಾಗಿರಿಸಿಕೊಂಡಿರುವದರಿಂದ ಅವರು ಆಡುವ ಮಾತುಗಳು ಮತ್ತು ಅದನ್ನು ನಿವೇದಿಸುವ ರೀತಿ ಮೊದಲಿಗಿಂತಲೂ ಉತ್ತಮವಾಗಿರುವ ಪ್ರಯುಕ್ತ ಕಾವಲಾಗಿರಿಸುವದು ಅಷ್ಟೇನೂ ಕಷ್ಟವಾಗಿ ಕಂಡು ಬರುವದಿಲ್ಲ. ಆದರೂ ಅಪೋಸ್ತಲನ ಮಾತನ್ನು ಜ್ಞಾಪದಲ್ಲಿಟ್ಟುಕೊಳ್ಳುವದು ಅವಶ್ಯ; ಅದೇನಂದರೆ, “ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ, ಅವನು ಶಿಕ್ಷಿತನೂ, ತನ್ನ ದೇಹವನ್ನು ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.” ಯಾಕೋಬ 3:2 R3305

