31 ಅಕ್ಟೋಬರ್ರ ದೈನಂದಿನ ಭಕ್ತಿಚಿಂತನೆ
ನಿನ್ನ ಪ್ರೇಮಾನುಭವವು ಜೀವಕ್ಕಿಂತಲೂ ಶ್ರೇಷ್ಠ. ನನ್ನ ಬಾಯಿ ನಿನ್ನನ್ನು ಕೀರ್ತಿಸುವದು. ಕೀರ್ತನೆಗಳು 63:3
ಯಾರು ಕರ್ತನ ಕೃಪೆಯನ್ನು ಸವಿದಿದ್ದಾರೋ, ಯಾರು ಕರ್ತನ ಅನುಗ್ರಹವನ್ನು ತಮ್ಮ ಜೀವಕ್ಕಿಂತ ಶ್ರೇಷ್ಠವೆಂದಣಿಸಿದ್ದಾರೋ ಮತ್ತು ಸಂತೋಷವಾಗಿ ತಮಗಿರುವ ಪ್ರಾಪಂಚಿಕ ಒಳ್ಳೆಯ ವಸ್ತುಗಳನ್ನೂ, ವಿಷಯಗಳನ್ನೂ ನಿರೀಕ್ಷೆ ಮತ್ತು ಆಶೆಗಳನ್ನು ಕರ್ತನ ಯಜ್ಞವೇದಿಯ ಮೇಲೆ ಸಮರ್ಪಿಸಿರುವರೋ, ಅವರು ಕತ್ತಲೆಯಿಂದ ದಿವ್ಯ ಮತ್ತು ಆಶ್ಚರ್ಯಕರವಾದ ಬೆಳಕಿಗೆ ಕರೆದಿರುವ ಕರ್ತನ ಶುಭ ಸಮಾಚಾರವನ್ನು ಸಂತೋಷದಿಂದ ಇತರರಿಗೆ ತಿಳಿಸುತ್ತಾರೆ. ಈ ಶುಭ ಸಮಾಚಾರವನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳದೆ ಅದನ್ನು ಸಾರುವದರಲ್ಲಿ ಸಂತೋಷಪಡುವರು ಹಾಗೂ ದೇವರ ಕೃಪೆಯನ್ನು ಪಡೆದು ಸಾರುವಾಗ ಅವರಿಗೆ ಕಷ್ಟ, ಹಣದ ವ್ಯಯ, ಸ್ನೇಹಿತರನ್ನು ಕಳೆದುಕೊಂಡು ಕಷ್ಟಪಡುವವರಾಗಿದ್ದು, ಕೆಲವು ವೇಳೆ ಕುಟುಂಬದಲ್ಲಿ ಒಡಕು, ಲೋಕದ ಹೀಯಾಳಿಕೆ ಹಾಗೂ ನಾಮಾಂಕಿತ ಸಭೆಯ ದೂಷಣೆಗೆ ಒಳಗಾದರೂ ಇವುಗಳನ್ನು ಬದಿಗಿಟ್ಟು ಸುವಾರ್ತೆಯನ್ನು ಸಂತೋಷದಿಂದ ಸಾರುವರು-Z ’01, 246 (R2850). R2852

