29 ಅಕ್ಟೋಬರ್ರ ದೈನಂದಿನ ಭಕ್ತಿಚಿಂತನೆ
ಸರ್ವವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಅತಿ ಸಂಕಟಪಡುವವರಲ್ಲ; ನಾವು ದಿಕ್ಕು ಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ. ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟವರಾಗಿದ್ದರೂ ಪ್ರಾಣ ನಷ್ಟಪಡುವವರಲ್ಲ............... ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುತ್ತಾ ತಿರುಗಾಡುತ್ತೇವೆ. ೨ ಕೊರಿಂಥದವರಿಗೆ 4:8-10
ಈ ಜೀವನದಲ್ಲಿ ಯಾರು ಕರ್ತನಿಗೋಸ್ಕರ ಸತ್ಯಕ್ಕಾಗಿ ಮಹಾ ಅವಮಾನವನ್ನು, ಅಪಕೀರ್ತಿ, ಶೋಧನೆಗಳು ಮತ್ತು ಮಹಾ ಹಿಂಸೆಗಳನ್ನು ಸಂತೋಷದಿಂದ ಸಹಿಸಿಕೊಂಡು ಕರ್ತನು ಅನುಭವಿಸಿದಂತೆ ಹೆಚ್ಚು ಕಡಿಮೆ ಅನುಭವಿಸಿ ಆತನ ಮಾದರಿಯಂತೆ ನಡೆದಿರುವರೋ ಅಂಥವರು ಅವರ ನಂಬಿಕೆಗೆ ತಕ್ಕಂತೆ ಅವರ ತ್ಯಾಗ, ಬಲಿದಾನಗಳನ್ನು ತೋರಿಸಿರುವರೋ, ಅಂಥವರು ಮುಂದಿನ ಕಾಲದಲ್ಲಿ ಶ್ರೇಷ್ಠ ಬಹುಮಾನವನ್ನು ಪಡೆಯುವರು. ಅಪೋಸ್ತಲನು ಹೇಳುವಂತೆ “ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ, ಇನ್ನೊಂದು ನಕ್ಷತ್ರಕ್ಕೂ ಹೆಚ್ಚು ಕಡಿಮೆಯುಂಟಷ್ಟೆ”-Z ’01, 55 (R2760). R2762

