4 ಅಕ್ಟೋಬರ್ರ ದೈನಂದಿನ ಭಕ್ತಿಚಿಂತನೆ
ಅವರಿಗೆ ಆತನು - ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು, ಎಂದು ............... ಮತ್ತಾಯನು 4:19
ನಮ್ಮ ಜೀವನದ ಎಲ್ಲಾ ವ್ಯವಹಾರಗಳು ನಮ್ಮ ಭವಿಷ್ಯತ್ತಿನಲ್ಲಿ ಲಾಭ ತರುವಂಹ ಪಾಠಗಳನ್ನು ಕಲಿಸುತ್ತವೆ. ಇದು ನಾವು ಸ್ವೀಕರಿಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಮೀನು ಹಿಡಿಯುವ ವ್ಯವಹಾರದಲ್ಲಿ ಒಂದು ವಿಶೇಷವಾದ ಸಂಗತಿ ಇದೆ. ಅಪೋಸ್ತಲರು ತಮ್ಮ ಉಳಿದಿರುವ ಜೀವಮಾನದಲ್ಲಿ ಇಂತಹ ವಿಶೇಷತೆಯನ್ನು ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಕರ್ತನು ಕರೆದಿದ್ದಾನೆ. ಮೀನು ಹಿಡಿಯಲಿಕ್ಕೆ ಬುದ್ಧಿವಂತಿಕೆ, ಶಕ್ತಿ, ಜಾಣತನ ಅವಶ್ಯ. ಗಾಳಕ್ಕೆ ಹುಳುವನ್ನು ಸಿಕ್ಕಿಸಿ, ಗಾಳಹಾಕಿ ಬೆಸ್ತನು ಮರೆಯಾಗಿರುವನು. ಈ ನಾಲ್ಕು ಸಂಗತಿಗಳು ಆತ್ಮೀಕವಾಗಿ ಮೀನು ಹಿಡಿಯಲಿಕ್ಕೆ ಅವಶ್ಯವಾಗಿದೆ ಎಂಬದನ್ನು ಕರ್ತನು ಬೋಧಿಸಿ ಅಪೋಸ್ತಲರಿಗೆ ಈ ಕಾರ್ಯ ನಿರ್ವಹಿಸಲು ಅವಕಾಶಕೊಟ್ಟಿದ್ದಾನೆ. ನಮಗೆ ತಿಳಿದಿರುವಂತೆ ಮೀನು ಸ್ವಲ್ಪ ಶಬ್ದವಾದರೂ ಅಥವ ತನ್ನನ್ನು ಹಿಡಿಯಲಿಕ್ಕೆ ಯಾರೋ ಬಂದಿದ್ದಾರೆ ಎಂದು ಗೊತ್ತಾದ ತಕ್ಷಣ, ಅಪಾಯದ ಭೀತಿಯಿಂದ ಎಚ್ಚರವಹಿಸುತ್ತದೆ. ಇದೇ ರೀತಿ ಮಾನವ ಜನಾಂಗವು ಸಹ ತಮ್ಮನ್ನು ಯಾರಾದರೂ ವಶಪಡಿಸಿಕೊಳ್ಳುತ್ತಾರೆಂದಲ್ಲಿ ಅಥವಾ ಯಾವುದೋ ವಶಕ್ಕೆ ತಾವು ಒಳಗಾಗುತ್ತೇವೆಂದು ತಿಳಿದಲ್ಲಿ, ಗಾಬರಿಯಿಂದ ಸಂಕೋಚಪಡುತ್ತದೆ. ಅದರಲ್ಲೂ ತಾನು ಎಲ್ಲವನ್ನು ತ್ಯಜಿಸಬೇಕಾಗುತ್ತದೆ ಎಂಬ ಅನುಮಾನವಿದ್ದರೆ, ಈ ಕೃತ್ಯವೆಸಗುತ್ತದೆ ಮತ್ತು ಈ ರೀತಿಯಲ್ಲಿ ಲೋಕವು ಪ್ರತಿಷ್ಠೆಯನ್ನು ತಿಳಿದುಕೊಂಡಿದೆ-Z ’04, 26, 27 (R3307). R3308

