28 ಅಕ್ಟೋಬರ್ರ ದೈನಂದಿನ ಭಕ್ತಿಚಿಂತನೆ
ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭ ವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನ ಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ ....... ಬೂದಿಗೆ ಬದಲಾಗಿ ಶಿರೋಭೂಷಣ, ದುಃಖವಿದ್ದಲ್ಲಿ ಆನಂದ ತೈಲ........ ಯೆಶಾಯ 61:1-3
ನಮಗೆ ಆಜ್ಞಾಪಿಸಿರುವದೇನಂದರೆ, ನಾವು ದುಃಖಿಸುವವರನ್ನು ದೀನತೆಯುಳ್ಳವರನ್ನು ಇವರು ತಮ್ಮ ಬಲಹೀನತೆ ಮತ್ತು ಕೊರತೆಗಳನ್ನು ತಿಳಿದು ಆಶ್ರಯಸ್ಥಾನ ಹಾಗೂ ವಿಮೋಚನೆಯನ್ನು ಪಡೆಯಲು ಮತ್ತು ತವಕ ಪಡುವವರನ್ನು ಸಂತೈಸಲು ದೇವರು ನಮ್ಮನ್ನು ನೇಮಿಸಿದ್ದಾನೆ. ಇದರಲ್ಲಿ ನಮ್ಮ ಮುಖ್ಯ ಕಾರ್ಯವೇನೆಂದರೆ ನಾವು ಇವರನ್ನು ಆ ದೇವರ ಕುರಿಮರಿಯ ಕಡೆಗೆ ತಿರುಗಿಸುವದು. ಈ ಕುರಿಮರಿ ಲೋಕದ ಪಾಪವನ್ನು ನಿವಾರಣೆ ಮಾಡಿರುವ ಬಗ್ಗೆ ಇವರಿಗೆ ಮಾಹಿತಿ ಕೊಡುವದು ಹಾಗೂ ಮರಣವೆಂಬ ಬೂದಿಗೆ ಬದಲಾಗಿ ಪುನರುತ್ಥಾನವೆಂಬ ಸುಂದರ ವಾರ್ತೆಗೆ ಅವರನ್ನು ಆಕರ್ಷಿಸುವದು ಹಾಗೂ ಈಗಿನ ಕಾಲದಲ್ಲಿ ಅನುಭವಿಸುತ್ತಿರುವ ದುಃಖ, ದುಗುಡ, ನಿರಾಶೆ, ಹಿಂಸೆ ಮತ್ತು ಸಂಕಟವನ್ನು ನಿವಾರಣೆ ಮಾಡುತ್ತೇವೆಂದು ಕರ್ತನು ಮಾಡಿರುವ ವಾಗ್ದಾನದ ಕಡೆಗೆ ಇವರನ್ನು ತಿರುಗಿಸಿ ಆನಂದವನ್ನು ಅನುಭವಿಸುವಂತೆ ಮಾಡುವದಾಗಿದೆ. ಇವರಿಗೆ ನಾವು ಸಾರುವ ಸಂದೇಶವೇನೆಂದರೆ “ಮುಂಜಾವಿನ ಹರ್ಷ ಧ್ವನಿ ಕೇಳಿಸುತ್ತದೆ”, ಎಂಬುದಾಗಿ ತಿಳಿಸುವದು ಮತ್ತು ಅವರು ಎದ್ದು ಸ್ತೋತ್ರವೆಂಬ ವಸ್ತ್ರವನ್ನು ಹೊದ್ದುಕೊಳ್ಳಲು ಅವರಿಗೆ ಸಹಾಯಮಾಡಿ, ಅವರು ನೂತನ ಜೀವನದಲ್ಲಿ ಕಾಲಿಟ್ಟು ನಡೆಯುವಂತೆ ಪ್ರೋತ್ಸಾಹಿಸಿ ಅವರು ಬಾಯಿಯಿಂದ ಹೊಸಹಾಡು ಹಾಡುವಂತೆ ಮಾಡುವದಾಗಿದೆ. ಈ ಹಾಡು ದೇವರ ಪ್ರೀತಿ ಮತ್ತು ಕರುಣೆಯಿಂದ ಕೂಡಿದ ಹಾಡು-Z ’04, 295 (R3434). R3436

