8 ಅಕ್ಟೋಬರ್ರ ದೈನಂದಿನ ಭಕ್ತಿಚಿಂತನೆ
ಮೋಸಹೋಗಬೇಡಿರಿ ................... ತಾನು ಏನು ಬಿತ್ತುತ್ತಾನೋ, ಅದನ್ನೇ ಕೊಯ್ಯಬೇಕು. ತನ್ನ ಶರೀರ ಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯ ಜೀವವನ್ನು ಕೊಯ್ಯುವನು. ಗಲಾತ್ಯದವರಿಗೆ 6:7, 8
ನಾವು ಶರೀರ ಭಾವದಿಂದ ಉದ್ಭವಿಸುವ ಸ್ವಾರ್ಥತೆ, ಅನೀತಿ, ಅನ್ಯಾಯದಿಂದ ತುಂಬಿದ ಆಶೆಗಳು ನಮ್ಮ ಹೃದಯ ಮತ್ತು ಜೀವನವನ್ನು ತುಂಬುವಂಥ ವಿಷಯಗಳನ್ನು ಸದಾಕಾಲವೂ ಬಿತ್ತುವದಾದರೆ ಇವು ಹೆಚ್ಚಾಗಿ ಪುನಃ ಪುನಃ ಆತ್ಮನಿಗೆ ವಿರುದ್ಧವಾದ ಬಿತ್ತುವಿಕೆ ಮುಂದುವರೆದು ಕೊನೆಗೆ ಅವನನ್ನು ಮರಣಕ್ಕೆ ಕೊಂಡೊಯ್ಯುವದು. ಅದು ಎರಡನೇ ಮರಣ. ಇದಕ್ಕೆ ಬದಲಾಗಿ ನಾವು ಪ್ರತಿಸಲವೂ ಆತ್ಮನಿಗೆ ಅನುಗುಣವಾದ ಅಂದರೆ, ಸ್ವಾರ್ಥತೆಯನ್ನು ಮತ್ತು ಶರೀರಕ್ಕೆ ಸಂಬಂಧಿಸಿದ ಆಶೆಗಳನ್ನು ನಿರಾಕರಿಸಿ ನಮ್ಮ ನೂತನ ಮನಸ್ಸು ಮತ್ತು ನೂತನ ಚಿತ್ತವನ್ನು ಆತ್ಮೀಕ ನಿರ್ದೇಶನಕ್ಕೆ ಬಿಟ್ಟು, ಶುದ್ಧ ವಿಷಯಗಳು, ಗಾಂಭೀರ್ಯ ವಿಷಯಗಳು, ಒಳ್ಳೆಯ ವಿಷಯಗಳು, ಸತ್ಯದ ವಿಷಯಗಳನ್ನು ಬಿತ್ತುವದಾದರೆ, ಹೆಚ್ಚಾದ ಆತ್ಮದ ಫಲಗಳು ಸಿಕ್ಕುತ್ತವೆ. ಇವುಗಳನ್ನು ಕಾಪಾಡುವದಾದರೆ, ಕರ್ತನು ನಮಗೆ ಮಾಡಿರುವ ಕೃಪಾ ವಾಗ್ದಾನಗಳು ಮತ್ತು ಆತನ ಏರ್ಪಾಟುಗಳಾದ ನಿತ್ಯಜೀವ, ಇವು ನಮ್ಮನ್ನು ಮಹಿಮೆಯ ರಾಜ್ಯವನ್ನು ಸೇರಲು ಕೊಂಡೊಯ್ಯುತ್ತವೆ-Z ’04, 57 (R3321). R3323

