22 ಅಕ್ಟೋಬರ್ರ ದೈನಂದಿನ ಭಕ್ತಿಚಿಂತನೆ
ನಾನು ಕುಡಿಯಬೇಕಾಗಿರುವ ಪಾತ್ರೆಯಲ್ಲಿ ನೀವು ಕುಡಿಯುವದು ನಿಮ್ಮಿಂದಾದೀತೇ. ಮತ್ತಾಯನು 20:22
ನಮ್ಮ ಕರ್ತನು ನಡೆದ ಇಕ್ಕಟ್ಟಾದ ಮಾರ್ಗದಲ್ಲಿ ಆತನು ತೋರಿಸಿದ ಧೈರ್ಯವನ್ನು ಮೆಚ್ಚಬಹುದಾಗಿದೆ. ಆತನು ದೇವರ ಚಿತ್ತವನ್ನು ನೆರವೇರಿಸುವದಕ್ಕಾಗಿ ಯಾವ ಕಾರಣಕ್ಕೂ ಹಿಂದಿರುಗದೆ ಮುನ್ನಡೆದ ಆತನ ಬಲವಾದ ಗುಣಮಟ್ಟವು ಶ್ಲಾಘ್ಯವಾಗಿದೆ. ಅಂದರೆ, ಇತರರಿಗಾಗಿ ಮತ್ತು ಅವರ ಅಭ್ಯುದಯಕ್ಕೆ ತನನ್ನು ತಾನೇ ಸಮರ್ಪಿಸಿಕೊಂಡದ್ದಾಗಿದೆ. ಅಪೋಸ್ತಲರು ಆತನಲ್ಲಿ ಕಂಡ ಗಂಭೀರತೆ ಮತ್ತು ಆದರ್ಶವೇನಂದರೆ, ಆತನಲ್ಲಿದ್ದ ಮಹಾ ದೀನತೆ ಮತ್ತು ಸೇವೆಯಿಂದ ಸಾಧಿಸಿದ ಜಯ. ಇದರಿಂದ ನಾವು ತಿಳಿಯತಕ್ಕದ್ದೇನಂದರೆ, ಆತನು ಕುಡಿದ ಪಾತ್ರೆಯಲ್ಲಿ ನಾವು ಭಾಗಿಗಳಾಗಿರದೆ ಹೋದರೆ ಮಹಿಮೆಯುಳ್ಳ ಬರುವ ರಾಜ್ಯದಲ್ಲಿ ಸೇರಲು ಸಾಧ್ಯವಾಗುವದಿಲ್ಲವೆಂಬುದೇ. ಹೀಗಿರುವದರಿಂದ ನಾವು ಎಲ್ಲವನ್ನು ನಷ್ಟವೆಂದೆಣಿಸಿ, ಈ ಅನುಭವವನ್ನು ವಿಶೇಷತರವಾಗಿ ಪಡೆಯಲು ಪ್ರಯತ್ನಿಸೋಣ. ಈ ಮಾರ್ಗದಲ್ಲಿ ನಮಗೆ ಸಂಭವಿಸುವ ವಿಪರೀತ ಅನುಭವಗಳಿಗೆ ಹೆದರದೆ, ನಾವು ಎದುರುಗೊಳ್ಳುವ ಪರಿಶೋಧನೆಗಳಿಂದ ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸದೆ ಮತ್ತು ಆ ಕಾರಣಕ್ಕಾಗಿಯೇ ನಾವು ಕರೆಯಲ್ಪಟ್ಟಿದ್ದೇವೆಂದು ತಿಳಿದು ಕರ್ತನೊಂದಿಗೆ ಹಿಂಸಾನುಭವಗಳನ್ನು ತಾಳಿಕೊಂಡು ನಂತರ ಆತನೊಂದಿಗೆ ರಾಜ್ಯದಲ್ಲಿ ಸೇರಲು ಯತ್ನಿಸೋಣ-Z ’04, 138, 139 R3362

