6 ಅಕ್ಟೋಬರ್ರ ದೈನಂದಿನ ಭಕ್ತಿಚಿಂತನೆ
ಗದರಿಸಿ ಹೇಳಿದ್ದೇನೆಂದರೆ, ನೀವೆಂಥ ಆತ್ಮಕ್ಕೆ ಅಧೀನರಾದಿರೆಂದು ನಿಮಗೆ ತಿಳಿಯದು, ಮನುಷ್ಯ ಕುಮಾರನು ಮನುಷ್ಯರ ಪ್ರಾಣಗಳನ್ನು ನಾಶಮಾಡುವದಕ್ಕೆ ಬಂದವನಲ್ಲ, ರಕ್ಷಿಸುವದಕ್ಕೆ ಬಂದವನು ಎಂದು ಬರೆದದೆ. ಲೂಕನು 9:55, 56
ಎಲ್ಲಾ ದೇವ ಜನರು ತಿಳಿಯತಕ್ಕದ್ದೇನೆಂದರೆ, ಅವರು ಜನರನ್ನು ಅತಿ ವಿಮರ್ಶಾತ್ಮಕವಾಗಿ ಖಂಡಿಸಿ, ಅವರ ಮೇಲೆ ದಂಡನೆಯನ್ನು ವಿಧಿಸುವಂತ ಮನಸ್ಸುಳ್ಳವರಾಗಿರಬಾರದು. ಅಂತಹ ಸ್ವಭಾವ ಅವರಲ್ಲಿದ್ದರೆ ಅದನ್ನು ನಿಗ್ರಹಿಸಬೇಕು. ಕರ್ತನು ಸ್ಥಾಪಿಸಿರುವ ನಿಯಮವೇನೆಂದರೆ, ನಾವು ಎಷ್ಟರಮಟ್ಟಿಗೆ ಇತರರ ಬಗ್ಗೆ ಕರುಣೆಯನ್ನು ತೋರಿಸುತ್ತೇವೆಯೋ ಅಷ್ಟರ ಮಟ್ಟಿಗೆ ದೇವರಿಂದ ನಾವು ಕರುಣೆಯನ್ನು ನಿರೀಕ್ಷಿಸಬಹುದು. ತಪ್ಪು ಹುಡುಕುವದು ಮತ್ತು ಇತರರನ್ನು ಖಂಡಿಸುವದು, ಅವರ ಮೇಲೆ ಅಪವಾದ ಹೊರಿಸುವದು, ಬಿಟ್ಟು ಹೋಗಿರುವ ಹೃದಯದ ಸ್ಥಿತಿಯನ್ನು ಸೂಚಿಸುತ್ತದೆ. ಇಂತಹ ದೋರಣೆಯ ಬಗ್ಗೆ ದೇವಜನರು, ತಮ್ಮನ್ನು ಕಾದಿರಿಸಿಕೊಳ್ಳಬೇಕು. ಕರ್ತನು ಆತ್ಮೀಕ ಇಸ್ರಾಹೇಲ್ಯರಾದ ನಮ್ಮಲ್ಲಿ ಕರುಣೆ, ಒಳ್ಳೆಯತನ, ಪ್ರೀತಿ ಗುಣಗಳನ್ನು ನಿರೀಕ್ಷಿಸುತ್ತಾನೆ. ಇಂತಹ ಗುಣಗಳು ನಮ್ಮಲ್ಲಿ ಇಲ್ಲದೆ ಹೋದರೆ, ನಾವು ಆ ದೇವರ ಮಕ್ಕಳಾಗಿ ಮುಂದುವರೆಯಲು ಸಾಧ್ಯವಾಗುವದಿಲ್ಲ-Z ’04, 43 (R3315). R3316

