1 ಅಕ್ಟೋಬರ್ರ ದೈನಂದಿನ ಭಕ್ತಿಚಿಂತನೆ
ನನ್ನ ನಾಲಿಗೆ ಪಾಪಕ್ಕೆ ಹೋಗದಂತೆ ಜಾಗರೂಕನಾಗಿರುವೆನು. ದುಷ್ಟರು ನನ್ನ ಮುಂದೆ ಇರುವಾಗ ಬಾಯಿಗೆ ಕುಕ್ಕೆಹಾಕಿಕೊಂಡಿರುವೆನು ಅಂದುಕೊಂಡೆನು. ಕೀರ್ತನೆಗಳು 39:1
ಅನುಭವವುಳ್ಳ ಪ್ರತಿಯೊಬ್ಬ ವ್ಯಕ್ತಿಯು ಮೇಲ್ಕಂಡ ವಾಕ್ಯದಲ್ಲಿ ಕೊಟ್ಟಿರುವ ಹೇಳಿಕೆಯನ್ನು ಅಂದರೆ, ನಾಲಿಗೆಯು ದೇಹದ ಬೇರೆ ಎಲ್ಲಾ ಅಂಗಗಳಿಗಿಂತ ಪ್ರಬಲವಾದ ಪ್ರಭಾವವನ್ನು ಒಳ್ಳೆಯದಕ್ಕಾಗಲಿ, ಕೆಟ್ಟದಕ್ಕಾಗಲಿ ಬೀರುತ್ತದೆ ಎಂಬುದನ್ನು ಸಂಪೂರ್ಣವಾಗಿ ಒಪ್ಪುತ್ತಾನೆ. ಹಾಗೆಯೇ, ಅನುಭವವು ನಮಗೆ ಬೋಧಿಸುವದೇನಂದರೆ, ನಾಲಿಗೆಯನ್ನು ಹೊರತು, ಬೇರೆ ಯಾವ ಅಂಗವನ್ನಾದರೂ ನಾವು ಸುಲಭವಾಗಿ ಸ್ವಾದೀನಪಡಿಸಿಕೊಳ್ಳಬಹುದು ಎಂಬುದಾಗಿ ಬಹುಪಾಲು ಜನರು ಒಪ್ಪುತ್ತಾರೆ. ಈ ನಾಲಿಗೆಯು ಎಷ್ಟು ಜಾಣ್ಮೆಯುಳ್ಳದ್ದಾಗಿದೆಯೆಂದರೆ, (ಪ್ರತಿಯೊಂದು ಆಶೆ, ಮೋಹ ಮತ್ತು ಬಿದ್ದುಹೋಗಿರುವ ಮಾನವ ಸ್ವಭಾವಗಳು ನಾಲಿಗೆಯನ್ನು ತನ್ನ ಸೇವಕನಾಗಿ ಅಥವಾ ಸಾಧನವಾಗಿ ಕೆಟ್ಟದ್ದನ್ನು ಮಾಡಲು ಉಪಯೋಗಿಸುತ್ತದೆ. ಹೀಗಿರುವಲ್ಲಿ ಕ್ರೈಸ್ತನಾಗಿರುವವನು ಬಹು ಎಚ್ಚರಿಕೆಯಿಂದಿದ್ದು, ಬುದ್ಧಿವಂತಿಕೆಯಿಂದ ನಾಲಿಗೆಯನ್ನು ಕ್ರಿಸ್ತೀಯ ನೂತನ ಮನಸ್ಸಿನ ಹತೋಟಿಯಲ್ಲಿಟ್ಟುಕೊಂಡು ಅದು ತನಗೆ ಮತ್ತು ಇತರರಿಗೂ ಅಡಚಣೆ ಮಾಡದಂತೆ ಇಕ್ಕಟ್ಟಾದ ಮಾರ್ಗದಲ್ಲಿ ನಡೆಯುತ್ತಿರುವ ನಮ್ಮೆಲ್ಲರಿಗೂ ಸಹಾಯಕವಾಗುವಂತೆ ಉಪಯೋಗಿಸಬೇಕು-Z ’97, 156 R2156

