7 ಅಕ್ಟೋಬರ್ರ ದೈನಂದಿನ ಭಕ್ತಿಚಿಂತನೆ
ಆದರೆ, ಈ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದ ಪ್ರತಿಯೊಬ್ಬನು ಉಸುಬಿನ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಹೀನ ಮನುಷ್ಯನನ್ನು ಹೋಲುವನು. ಮತ್ತಾಯನು 7:26
ಕರ್ತನ ವಾಗ್ದಾನಗಳನ್ನು ನಿರೀಕ್ಷಿಸಿ ಕಟ್ಟುವವನು ಕೃತಿಗಳನ್ನೊಳಗೊಂಡಂತೆ ಕಟ್ಟದಿದ್ದರೆ, ಮರಳಿನ ಮೇಲೆ ಮನೆ ಕಟ್ಟುವಂತಾಗುತ್ತದೆ. ಇದು ಕಾಲದ ಪ್ರಶ್ನೆ ಅಂದರೆ, ಕಠಿಣ ಶೋಧನೆ ಬಂದಾಗ ಅಂತಹ ನಿರೀಕ್ಷೆ ನಿಷ್ಪಲವಾಗುತ್ತವೆ. ನಿರೀಕ್ಷೆಯುಳ್ಳವನು ತನ್ನನ್ನು ಮೋಸಪಡಿಸಿಕೊಳ್ಳುತ್ತಾನೆ. ದೇವರ ರಾಜ್ಯದಲ್ಲಿ ತನಗೆ ಪಾಲು ಸಿಕ್ಕುವದು ಎಂಬ ಅವನ ಭರವಸೆ ನಿರಾಶೆಯಾಗಿ ಪರಿಣಮಿಸುವದು. ಇದಕ್ಕೆ ಬದಲಾಗಿ ವಿಧೇಯನಾಗಿದ್ದು ಕಟ್ಟುವ ಪ್ರತಿಯೊಬ್ಬನು ತನ್ನ ಹೃದಯ ಹಾಗೂ ತನ್ನ ನಾಲಿಗೆಯಿಂದ ಕರ್ತನನ್ನು ಗೌರವಿಸಿ ಆತನ ಮಾತಿಗೆ ತಕ್ಕಂತೆ ನಡೆದು ತನ್ನಲ್ಲಿರುವ ನಂಬಿಕೆಗೆ ತಾನು ಮಾಡುವ ಕೃತ್ಯಗಳು ಹೊಂದಾಣಿಕೆಯಾಗಿದ್ದು ಮತ್ತು ಅದರ ಫಲ ಕೊಡುವ ಸಾಕ್ಷಿ ಕರ್ತನ ಅತಿ ಮಹತ್ವದ ಸಂಬಂಧವನ್ನು ಸೂಚಿಸುತ್ತದೆ. ಇವರು ತಮ್ಮ ಸೇವೆಯ ಜೀವನದಲ್ಲಿ ಬಂದೊದಗುವ ಭೀಕರ ಬಿರುಗಾಳಿ ಮತ್ತು ಮಳೆಗಳಿಗೆ ಅಲುಗಾಡುವದಿಲ್ಲ ಮತ್ತು ಕುಸಿಯುವದೂ ಇಲ್ಲ; ಏಕೆಂದರೆ, ಇವರು ಕ್ರಿಸ್ತನೆಂಬ ಬಂಡೆಯ ಮೇಲೆ ಮನೆಯನ್ನು ಕಟ್ಟಿದ್ದಾನೆ-Z ’04, 36 (R3317). R3318

