19 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಆದಕಾರಣ, ನಾವು ಇತರರಂತೆ ನಿದ್ದೆ ಮಾಡದೆ ಎಚ್ಚರವಾಗಿರೋಣ ೧ ಥೆಸಲೊನೀಕದವರಿಗೆ 5:6
ಎಚ್ಚರವಾಗಿರುವದೆಂದರೆ, ದೇವರು ನಮಗೆ ಕೊಟ್ಟಿರುವ ಎಲ್ಲಾ ನಿರ್ದೇಶನಗಳನ್ನು ಬಹು ಜಾಗರೂಕತೆಯಿಂದ ಅಧ್ಯಯನ ಮಾಡಿ ದೇವರು ಮೆಚ್ಚುವಂತೆ ಸೇವೆ ಮಾಡುವವರಾಗಬೇಕು. ನಾವು ನಮ್ಮ ಮಹಾಯಾಜಕನಾದ ಕ್ರಿಸ್ತನು ನಡೆದಂತೆ ಆದಷ್ಟುಮಟ್ಟಿಗೆ ನಮ್ಮಲ್ಲಿರುವ ಸಾಮಥ್ರ್ಯದಂತೆ ನಡೆಯೋಣ. ನಾವು ಶಾಂತ ಚಿತ್ತರಾಗಿ ಕರ್ತನಲ್ಲಿ ಸಂತೋಷಿಸುತ್ತಾ, ಲೋಕದ ಚಿಂತೆಗಳನ್ನು ಬದಿಗಿಟ್ಟು ಇತರರು ದೇವರ ಯೋಜನೆಯನ್ನು ತಿಳಿಯದೆ ಅದನ್ನು ಅಪಾರ್ಥ ಮಾಡಿಕೊಂಡು, ಚಿಂತೆಯಲ್ಲಿ ಮುಳುಗಿ ಹೋಗುವರು. ಆ ರೀತಿ ನಾವು ಮುಳುಗಿಹೋಗದೆ ನಮಗಾಗುತ್ತಿರುವ ಅನುಭವಗಳನ್ನು ನಮಗಿರುವ ಅವಕಾಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಿಪಡಿಸಿ ಕರ್ತನ ಸೇವೆಗೆ ಸಂಬಂಧಿಸಿರುವ ಎಲ್ಲವನ್ನು ಗ್ರಹಿಸಿ ಸೇವೆ ಮಾಡೋಣ. ನಮಗೆ ಒದಗಿಬರುವ ಅವಕಾಶಗಳಾಗಲಿ, ಸೇವೆ ಮಾಡುವ ಸಂದರ್ಭಗಳಾಗಲಿ ತಪ್ಪಿ ಹೋಗದಂತೆ ನೋಡಿಕೊಂಡು ಎಚ್ಚರವಾಗಿದ್ದು ಸೇವೆ ಮಾಡೋಣ-Z ’02, 239 (R3054). R3056

