8 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತಬಾರದು. ವಿಮೋಚನಕಾಂಡ 20:7
ಈ ಆಜ್ಞೆಯನ್ನು ಆತ್ಮೀಯ ಇಸ್ರಾಯೇಲ್ಯರಿಗೆ ಕೊಡದೆ ಇದ್ದರೂ ಅದರ ಭಾವ ಎಷ್ಟೋ ವಿಶೇಷವಾಗಿ ನಮ್ಮನ್ನು ಸೆಳೆಯುವದು. ಯಾಕಂದರೆ, ನಾವು ಕ್ರಿಸ್ತನ ಹೆಸರನ್ನು ನಮ್ಮದಾಗಿಸಿಕೊಂಡಿರುವೆವು. ಈ ಪರಿಶುದ್ಧ ನಾಮವು ಎಲ್ಲಾ ಪ್ರತಿಷ್ಠೆಪಡಿಸಿಕೊಂಡಿರುವ ಎಲ್ಲಾ ದೇವ ಜನರಿಗೆ ಸೇರಿದೆ. ಹೀಗಿರುವಲ್ಲಿ ಈ ವಿಷಯದ ಆಲೋಚನೆಯು ನಮಗೆ ವಿಶೇಷ ಎಚ್ಚರಿಕೆಯನ್ನು ಕೊಡುವಂಥದ್ದಾಗಿದೆ. ಆಗ ನಾವು ಹೇಳುವದೇನೆಂದರೆ, “ನಾವು ಕರ್ತನ ನಾಮವನ್ನು ಅಯೋಗ್ಯ ಕಾರ್ಯಕ್ಕೆ ಎತ್ತಲಿಲ್ಲ. ನಾವು ಆತನ ಗಾಂಭೀರ್ಯ, ಸ್ಥಾನ ಮತ್ತು ಜವಾಬ್ದಾರಿಯನ್ನು ಮೆಚ್ಚುತ್ತೇವೆ. ಹಾಗೂ ನಾನು ಆತನ ಪ್ರತಿನಿಧಿಯಾಗಿ ಮತ್ತು ರಾಯಭಾರಿಯಾಗಿ ಈ ಲೋಕದಲ್ಲಿರುವದನ್ನು ಗಂಭೀರವಾಗಿ ಯೋಚಿಸುತ್ತೇನೆ. ನಾನು ಆದಷ್ಟುಮಟ್ಟಿಗೆ ಆತನೊಂದಿಗೆ ಎಚ್ಚರದಿಂದ ಹೆಜ್ಜೆ ಹಾಕುತ್ತೇನೆ. ನಾನು ಯಾವ ವಿಧದಲ್ಲಿಯೂ ಆತನಿಗೆ ಅವಮಾನವಾಗದಂತೆ ನೋಡಿಕೊಳ್ಳುತ್ತೇನೆ. ಬದಲಾಗಿ ನಾನು ನನ್ನ ಎಲ್ಲಾ ಯೋಚನೆ, ಮಾತು ಮತ್ತು ಕೃತಿಗಳಲ್ಲಿ ಆತನಿಗೆ ಘನತೆ ಬರುವಂತೆ ವರ್ತಿಸುತ್ತೇನೆ-Z ’04, 73 (R3329). R3331

