11 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನು ...... ಕೂಡಿಸಿರಿ. ೨ ಪೇತ್ರನು 1:5
ಕರ್ತನ ಜನರಿಗಿರುವ ಒಂದು ಕಷ್ಟಕರವಾಗಿರುವ ವಿಷಯವೇನಂದರೆ, ಶೋಧನೆಯನ್ನು ತಡೆಯಲು ಸರಿಯಾದ ಮಾರ್ಗವನ್ನು ಕಂಡುಕೊಂಡಿದ್ದರೂ, ಅದನ್ನು ನಿರ್ದಿಷ್ಟವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ. ಇಂಥಹ ಸಮಯದಲ್ಲಿ ಬಹು ಜನರು ಶೋಧಕನಿಗೆ - ‘ನಾನು ನಿನಗೆ ಸೋಲುವದಿಲ್ಲ’ವೆಂದು ಹೇಳುತ್ತಾರೆ. ಹೀಗೆ ಮಾಡಿ ತಮ್ಮ ಮನಸ್ಸಿನಲ್ಲಿ ಶೋಧಕನು ಹಿಂದಿರುಗಲು ಅವಕಾಶವನ್ನು ಕಲ್ಪಿಸುವರು. ಈ ವಿಷಯದಲ್ಲಿ ನಮ್ಮ ಕರ್ತನು ತೋರಿಸಿರುವ ದಾರಿ ಏನೆಂದರೆ, ನಾವು ಶೋಧಕನನ್ನು ಒಂದು ಸಾರಿಯಲ್ಲದೆ, ಯಾವಾಗಲೂ ತಡೆಯಬೇಕೆಂಬುದೇ. ನಾವು ತೆಗೆದುಕೊಳ್ಳುವ ತೀರ್ಮಾನ ಹೇಗಿರಬೇಕೆಂದರೆ, ಆಪಾದಕ ದೂತನು ನಮ್ಮನ್ನು ಈ ರೀತಿ ಶೋಧಿಸುವದರಿಂದ ಯಾವ ಪ್ರಯೋಜನವೂ ಆಗದೆ ಅದನ್ನು ಅವನು ಯೋಚಿಸುವದನ್ನು ಬಿಡುವಂತೆ ಮಾಡುವದಾಗಿದೆ. “ಸೈತಾನನೇ ನೀನು ತೊಲಗಿ ಹೋಗು, ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು”, ಎಂಬದಾಗಿ ಬರೆದದೆ-Z ’04, 10 (R3296). R3299

