21 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾ ವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದದಾಯಕವಾದದ್ದೆಂದು ಎಣಿಸಿರಿ. ಯಾಕೋಬನು 1:2
ಪರೀಕ್ಷೆಗಳೆಲ್ಲಾ ಮುಗಿದುಹೋಗಿ ಜಯಶಾಲಿಗಳೊಳಗೆ ತಮಗೆ ತಕ್ಕ ಸ್ಥಾನ ದೊರಕುವದನ್ನು ಪ್ರತಿಯೊಬ್ಬನು ಆಶಿಸುವನು. ಆದರೆ, ನಂಬಿಕೆ ಮತ್ತು ವಿಶ್ವಾಸ ನಮ್ಮ ಹೃದಯಗಳಲ್ಲಿ ಕಾರ್ಯನಿರ್ವಹಿಸಿ ನಾವು ಶುದ್ಧರಾಗುವಂತೆಯೂ ಹಾಗೂ ಮೃದುವಾಗಿದ್ದು ಕರ್ತನಿಗೆ ವಿಧೇಯರಾಗುವಂತೆ ಮಾಡುವದು ಅವಶ್ಯ. ನಮಗಾಗುವ ಪರೀಕ್ಷೆಗಳಿಂದ ಕಲಿತ ಪಾಠಗಳು ನಮಗೆ ಲಾಭ ತರುವದಾದರೆ ನಾವು ಸಂಕಟಗಳಲ್ಲಿಯೂ ಆನಂದಪಡೋಣ. ಇವುಗಳು ನಮ್ಮ ಗುಣವನ್ನು ಬಲಪಡಿಸಿ ನಾವು ಸತ್ಯದಲ್ಲಿಯೂ, ನೀತಿಯಲ್ಲಿಯೂ ದೃಢವಾಗಿದ್ದು, ನಮ್ಮ ಬಲಹೀನತೆಯ ಬಗ್ಗೆ ಎಚ್ಚರದಿಂದಿದ್ದು ನಮ್ಮನ್ನು ನಾವು ಕಾದುಕೊಳ್ಳೋಣ. ಒಂದು ವೇಳೆ ನಮ್ಮ ಹೋರಾಟದ ಒಂದು ಭಾಗದಲ್ಲಿ ಜಯಸಾಧಿಸಿದ್ದರೆ, ಅದು ನಮ್ಮ ಅನುಕೂಲಕ್ಕಾಗಿಯೇ ಎಂದು ತಿಳಿಯೋಣ. ನಾವು ಕೆಲವು ಅಂಶಗಳಲ್ಲಿ ಪೂರ್ತಿ ಸೋತು ಹೋಗಿದ್ದರೂ, ಅದರ ಪರಿಣಾಮ ನಮ್ಮ ಗುಣವನ್ನು ಬಲಪಡಿಸುತ್ತದೆ. ಹಾಗೂ ಆ ದಿಕ್ಕಿನಲ್ಲಿ ನಾವು ದೃಢ ಸಂಕಲ್ಪವನ್ನು ಹೊಂದಿದವರಾಗಿ ತಗ್ಗಿದ ಮನಸ್ಸಿನಿಂದಲೂ, ಜಜ್ಜಿಹೋದ ಹೃದಯದಿಂದಲೂ ಕರ್ತನ ಸಮಕ್ಷಮದಲ್ಲಿ ಪ್ರಾರ್ಥಿಸೋಣ-Z ’02, 133 (R3000). R3001

