27 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ನೀವು ಪವಿತ್ರಾತ್ಮ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ, ವಿಜ್ಞಾಪನೆಯಿಂದಲೂ ದೇವರನ್ನು ಪ್ರಾರ್ಥಿಸಿರಿ. ಎಫೆಸದವರಿಗೆ 6:18
ನಾವು ಯಾವಾಗಲೂ ನಮ್ಮ ಎಲ್ಲಾ ನಡೆ ನುಡಿಗಳಲ್ಲಿ ಪ್ರಾರ್ಥನಾಪೂರ್ವಕವಾದ ಆತ್ಮೀಯತೆಯುಳ್ಳವರಾಗಿರಬೇಕು. ನಾವು ಯಾವಾಗಲೂ ಹೃದಯಪೂರ್ವಕವಾಗಿಯೂ, ನಿರಂತರವಾಗಿಯೂ ಕರ್ತನನ್ನು ಪ್ರಾರ್ಥಿಸಬೇಕು. ನಮ್ಮ ಜೀವನದ ಎಲ್ಲಾ ವ್ಯವಹಾರಗಳಲ್ಲಿ ಆತನ ನಡಿಸುವಿಕೆಗಾಗಿ ಪ್ರಾರ್ಥಿಸಬೇಕು. ಆಗ ನಾವು ನಮಗಿರುವ ಸಾಮಥ್ರ್ಯದಂತೆ ಕರ್ತನಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಮಾಡಬಹುದು ಹಾಗೂ ನಮಗೆ ಸಹಿಸಲಾಗದ ಶೋಧನೆ ಒದಗಿದರೂ ಕರ್ತನು ನಮ್ಮನ್ನು ಕಾಪಾಡಿ ಅಂತ್ಯದಲ್ಲಿ ಸೈತಾನನಿಂದ ನಮ್ಮನ್ನು ಬಿಡುಗಡೆ ಮಾಡಿ ದೇವರ ರಾಜ್ಯದಲ್ಲಿ ಒಂದು ಸ್ಥಾನ ಸಿಕ್ಕುವಂತೆ ಮಾಡುವನು. ಅದಕ್ಕಾಗಿ ನಾವು ಕರ್ತನನ್ನು ಪ್ರಾರ್ಥಿಸಬೇಕು. ಹೀಗಿರುವದರಿಂದ ಸಹೋದರರೇ, ನಮ್ಮ ಕರ್ತನು ಹೇಳಿರುವ ‘ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ’ ಎಂಬದನ್ನು ಜ್ಞಾಪಿಸಿಕೊಂಡು ಅದನ್ನು ಅಭ್ಯಾಸಮಾಡೋಣ-Z ’01, 80 (R2773). R2775

