20 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಹೀಗೆ ನೀವು ಮಾಡಿದರೆ ಎಂದಿಗೂ ಎಡಹುವುದಿಲ್ಲ. ೨ ಪೇತ್ರನು 1:10
ಇಲ್ಲಿ ಹೇಳಿರುವ, “ಹೀಗೆ ನೀವು ಮಾಡಿದರೆ” ಎಂಬುದು ನಾವು ಮಾಡುವ ಕೆಲಸ ಪರಿಪೂರ್ಣವಾಗಿರಬೇಕೆಂಬ ಅರ್ಥದಲ್ಲಿ ಹೇಳಿಲ್ಲ, ಬದಲು ನಮ್ಮ ಎಲ್ಲಾ ತಪ್ಪುಗಳು ಮತ್ತು ನಾವು ದಿನನಿತ್ಯದಲ್ಲಿ ಮಾಡುವ ಕ್ರಿಯೆಗಳಲ್ಲಿನ ಕೊರತೆ ಇವೆಲ್ಲವುಗಳನ್ನು ಕ್ರಿಸ್ತನು ತನ್ನ ನೀತಿವಸ್ತ್ರವನ್ನು ಹೊದಿಸಿ ಅವುಗಳನ್ನು ಮರೆಮಾಡಿದಾಗ ಹಾಗೂ ಕ್ರಿಸ್ತನ ನೀತಿಯನ್ನು ನಮ್ಮ ನಂಬಿಕೆಗೆ ಸೇರಿಸಿದಾಗ ನಾವು ಎಲ್ಲಾ ಗುಣಗಳನ್ನು ನಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಅಭ್ಯಾಸ ಮಾಡಿ ನಡೆದರೆ ನಾವು ಬಿದ್ದುಹೋಗುವದಿಲ್ಲ. ನಾವು ಮಾಡಬೇಕಾದುದೆಲ್ಲವನ್ನು ಮಾಡಿದರೂ ನಾವು ಲಾಭದಾಯಕವಲ್ಲದ ಸೇವಕರೇ ಆಗಿರುತ್ತೇವೆ. ನಾವು ನಮ್ಮ ಸ್ವಂತ ನೀತಿಯಿಂದ ಯಾವುದನ್ನು ಮಾಡಲೂ ಹೆದರುತ್ತೇವೆ. ಆದರೆ, ಕ್ರಿಸ್ತನು ತನ್ನ ನೀತಿ ವಸ್ತ್ರವನ್ನು ಹೊದಿಸಿದ್ದನ್ನು ನಮ್ಮದಾಗಿ ಮಾಡಿಕೊಂಡು ನಾವು ಸತತವಾಗಿ ಪರಿಶ್ರಮಪಟ್ಟು ನಮ್ಮ ನಮ್ಮ ರಕ್ಷಣೆಯನ್ನು ಸಂಪಾದಿಸಬೇಕು. ಯಾರು ಪಾಪವನ್ನು ವಿಸರ್ಜಿಸಿ ಶುದ್ಧ ಜೀವನವನ್ನು ಮಾಡಲು ಅಪೇಕ್ಷಿಸುತ್ತಾರೋ ಅಂಥವರಿಗೆ ಮಾತ್ರ ಕ್ರಿಸ್ತನು ತನ್ನ ನೀತಿ ವಸ್ತ್ರವನ್ನು ಹೊದಿಸುವನು. ಯಾಕಂದರೆ, ನಿರ್ಮಲ ಚಿತ್ತವಿಲ್ಲದೆ ದೇವರನ್ನು ನೋಡಲಿಕ್ಕೆ ಸಾಧ್ಯವಿಲ್ಲ-Z ’97, 148 (R2154). R2155

