9 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಯಾಕಂದರೆ ಶರೀರಭಾವವು ಅಭಿಲಾಷಿಸುವದು ಆತ್ಮನಿಗೆ ವಿರುದ್ಧವಾಗಿದೆÀ. ಆತ್ಮನು ಅಭಿಲಾಷಿಸುವದು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಚಿಸುವದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತದೆ. ಗಲಾತ್ಯದವರಿಗೆ 5:17
ಇಲ್ಲಿ ಒಂದಕ್ಕೊಂದು ವಿರುದ್ಧವಾಗಿ ಹೋರಾಡುವದನ್ನು ಸೂಚಿಸಿದೆ. ಮತ್ರ್ಯ ಮನಸ್ಸು ತನ್ನ ದೇಹವನ್ನು ಹತೋಟಿಯಲ್ಲಿಡಲು ಹಾಗೂ ಅದನ್ನು ನೂತನ ಮನಸ್ಸಿನ ಅಧೀನದಲ್ಲಿಡಲು ಪ್ರಯತ್ನಿಸುತ್ತಿದ್ದಾಗ್ಯೂ, ಮತ್ರ್ಯ ದೇಹವು ವಾಸ್ತವವಾಗಿ ಸಾಯದಿದ್ದರೂ ಪ್ರಪಂಚ ಹಾಗೂ ಆಪಾದಿತ ದೇವದೂತನ ಸಂಸರ್ಗದಿಂದ ನಿರಂತರವಾಗಿ ದೇಹವನ್ನು ಉತ್ತೇಜನಗೊಳಿಸಿ ಪ್ರಾಪಂಚಿಕ ಚಿಂತೆಗಳೂ, ಆಶೆಗಳೂ, ಶ್ರಮೆ, ಹೋರಾಟ ಮತ್ತು ಅವಿಧೇಯತೆ ಇವೆಲ್ಲವುಗಳಿಂದ ಚೇತನಗೊಂಡು ನೂತನ ಮನಸ್ಸು ಹಾಗೂ ಚಿತ್ತದಧೀನಕ್ಕೆ ದೇಹವು ಒಳಗಾಗುವದನ್ನು ತಪ್ಪಿಸಲು ಸತತವಾಗಿ ಪ್ರಯತ್ನಿಸುವವು. ಇಂಥಹ ಅನುಭವವನ್ನು ಪಡೆಯುವ ಯಾವ ಸಂತನು ಇಲ್ಲ. ಒಳಗೂ, ಹೊರಗೂ ಹೋರಾಟ ನಡೆಯುತ್ತಲೇ ಇರುತ್ತದೆ. ಈ ಹೋರಾಟವು ಅಂತ್ಯವರೆವಿಗೂ ನಡೆಯುವಂಥದ್ದು. ಈ ಹೋರಾಟದಲ್ಲಿ ಗೆದ್ದರೆ ಮಾತ್ರ ಬಹುಮಾನ ಪಡೆಯುವರು. ನೂತನ ಮನಸ್ಸು ಮತ್ತು ಚಿತ್ತ ದೇವರ ಕೃಪೆ ಮತ್ತು ಆತನು ಕೊಡುವ ಶಕ್ತಿಯಿಂದ ಮತ್ರ್ಯ ದೇಹವನ್ನು ಸ್ವಾಧೀನದಲ್ಲಿಡಬಹುದು. ಆದರೂ ಸಾಯುವತನಕ ಈ ಹೋರಾಟ ನಡೆಯುತ್ತಲೇ ಇರುವದು-Z ’03, 424 (R3272). R3275

