26 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಯೆಹೋವನು ಅವನನ್ನು - ಅದೇನು ನಿನ್ನ ಕೈಯಲ್ಲಿರುವದು ಎಂದು ಕೇಳಿದನು. ವಿಮೋಚನಕಾಂಡ 4:2
ಯಾವನನ್ನಾದರೂ ಕರ್ತನು ಅತಿ ಹೆಚ್ಚಾಗಿ ತನ್ನ ಆಶೀರ್ವಾದದಾಯಕ ಸೇವೆಯಲ್ಲಿ ಉಪಯೋಗಿಸುವದಾದರೆ, ಆ ಸೇವೆಗೆ ಅವನು ಸಮರ್ಥನಾಗಿರಲು ತನ್ನನ್ನು ಹೆಚ್ಚು ಹೆಚ್ಚಾಗಿ ಆ ಸೇವೆಗೆ ಅಂಟಿಕೊಂಡಿರಲು ಪ್ರಯತ್ನಿಸಲಿ. ಆತನು ದೇವರ ಅತಿ ಪ್ರೀತಿಯ ಮತ್ತು ಗೌರವ ಸ್ಥಾನದ ಸೇವಕನಾಗಿರುವ ಮೋಶೆಯಂತೆ ದೀನ ಸ್ವಭಾವ, ದೈನ್ಯತೆ, ಬಲ ಹಾಗೂ ತನ್ನನ್ನು ದೇವರಿಗಾಗಿ ಮೀಸಲಾಗಿಟ್ಟು ಉತ್ಸಾಹದಿಂದ ಸೇವೆ ಸಲ್ಲಿಸಲಿ. ಬುದ್ಧಿಯುಳ್ಳ ಮನೆವಾರ್ತೆಯವನು ತನ್ನಲ್ಲಿ ಪ್ರಾಕೃತವಾಗಿರುವ ಸಾಮಥ್ರ್ಯವನ್ನು ವೃದ್ಧಿಗೊಳಿಸಿ, ಕಾಯುವವನಾಗಿ, ಸ್ವಾಭಾವಿಕವಾಗಿ ಹೊಂದದೆ ಇರುವ ಸಾಮಥ್ರ್ಯಕ್ಕಾಗಿ ಕಳವಳಪಡದೆ ಕರ್ತನನ್ನು ಸೇವಿಸಲಿ. ಹೀಗಿರುವಲ್ಲಿ ನಮ್ಮಲ್ಲಿ ಪ್ರತಿಯೊಬ್ಬನು ದೀನ ಸ್ವಭಾವವುಳ್ಳವನಾಗಿ ಕರ್ತನ ಪ್ರೀತಿಗಾಗಿ ಉತ್ಸಾಹಭರಿತರಾಗಿ ಆತನ ಸೇವೆಯನ್ನು ಮಾಡೋಣ ಜೊತೆಗೆ ನಂಬಿಕೆಯಿಂದ ಆತನ ಶಕ್ತಿಯ ಮೇಲೆ ಆಧಾರಗೊಂಡು ನಮ್ಮ ಹೃದಯ ಮತ್ತು ಮನಸ್ಸುಗಳನ್ನು ಹದವಾದ ಸ್ಥಿತಿಯಲ್ಲಿಟ್ಟುಕೊಂಡು ದೇವರು ಯಾವ ಸೇವೆಗಾಗಿ ನಮ್ಮನ್ನು ನೇಮಿಸಿರುವನೋ ಆ ಸೇವೆಯನ್ನು ಆತನಿಗೆ ಮೆಚ್ಚಿಗೆಯಾಗುವಂತೆ ಮಾಡೋಣ-Z ’01, 348 (R 1651, 2902). R2904

