2 ನವೆಂಬರ್ರ ದೈನಂದಿನ ಭಕ್ತಿಚಿಂತನೆ
“ಆತನು ಯೆಹೋವನು; ತನಗೆ ಸರಿಕಾಣುವದನ್ನು ಮಾಡಲಿ”. ೧ ಸಮುವೇಲನು 3:18
ನಮ್ಮನ್ನು ಉತ್ತಮ ಏಳಿಗೆಗೆ ಕೊಂಡೊಯ್ಯುವದು ಯಾವುದೇ ಎಂಬದು ನಮಗೆ ತಿಳಿಯುವದಿಲ್ಲ. ಕೆಲವು ವೇಳೆ ಯಾವದನ್ನು ಇಷ್ಟಪಟ್ಟು ಅದರಿಂದ ನಮಗೆ ಒಳ್ಳೆಯದಾಗುತ್ತೆಂಬುದಾಗಿ ತಿಳಿಯುತ್ತೇವೆಯೋ ಅದರಿಂದ ನಮಗೆ ಅನಾನುಕೂಲವಾಗಬಹುದು. ಯಾರು ನಂಬಿಕೆಯಿಂದ ತಮಗೆ ಬಂದೊದಗುವ ಪರೀಕ್ಷೆಗಳು ಮತ್ತು ಸಂಕಷ್ಟಗಳ ನೆರಳನ್ನು ಮತ್ತು ಕಳವಳವನ್ನು ತೀಕ್ಷ್ಣವಾಗಿ ನೋಡುತ್ತಾರೋ ಅಂಥಹವರು ತಿಳಿಯುವದೇನಂದರೆ, “ಕರ್ತನು ತನ್ನವರು ಯಾರೆಂದು ತಿಳಿದಿರುವನು”, ಹಾಗೂ ಎಲ್ಲವನ್ನು ತನ್ನವರ ಹಿತಕ್ಕಾಗಿ ಒಳ್ಳೆಯದನ್ನೇ ಮಾಡುತ್ತಾನೆಂಬುದನ್ನು ಮನಗಾಣುವರು. ಹೀಗಿರುವಲ್ಲಿ ನಾವು ಕರ್ತನಲ್ಲಿ ತಾಳ್ಮೆಯಿಂದ ಕಾಯಬೇಕು; ತಮಗಾಗುವ ಅನುಭವಗಳು ಕರ್ತನ ಅನುಗ್ರಹದಿಂದಲೇ ಎಂದೂ ಮತ್ತು ಅವು ಆತನಿಂದ ಏರ್ಪಡಿಸಿರುವಂಥವು ಎಂಬದಾಗಿ ಅರಿತು ಆತನ ಜ್ಞಾನ, ಪ್ರೀತಿ ಮತ್ತು ಶಕ್ತಿಯನ್ನು ಕುರಿತು ಪ್ರಶ್ನಿಸದೆ ಎಲ್ಲವೂ ನಮ್ಮ ಒಳಿತಿಗಾಗಿ ಸಂಭವಿಸಿವೆ ಎಂಬದಾಗಿ ತಿಳಿಯತಕ್ಕದ್ದು-Z ’01, 147, 317 (R2887). R2888

