4 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡನು. ಫಿಲಿಪ್ಪಿಯವರಿಗೆ 2:7
ಯಾವ ಮನುಷ್ಯನೇ ಆಗಲಿ ಇಬ್ಬರು ಯಜಮಾನರಿಗೆ ಸೇವೆ ಮಾಡಿ ಅವರನ್ನು ತೃಪ್ತಿಪಡಿಸಲಾರನು, ಮತ್ತು ಅವರಿಗೆ ನ್ಯಾಯವಾಗಿ ಸೇವಿಸಲಾರನು. ಏಕೆಂದರೆ, ಅವರ ಇಚ್ಚೆ ಮತ್ತು ಸ್ವಭಾವಗಳು ಬೇರೆ ಬೇರೆಯಾಗಿರುತ್ತವೆ. ಇದೇ ರೀತಿ ನಾವೂ ಕೂಡ - ದೇವರನ್ನೂ ಮತ್ತು ಆತನ ನೀತಿಯನ್ನು ಅದೇ ಸಮಯದಲ್ಲಿ ಆಪಾದಕ ದೇವದೂತನನ್ನು ಅನುಸರಿಸುತ್ತಿರುವ ಈಗಿನ ಅಧಿಪತಿಗಳನ್ನಾಗಲಿ ಅಂದರೆ, ಕೆಟ್ಟದ್ದಾಗಿರುವ ಈಗಿನ ಜಗತ್ತನ್ನಾಳುತ್ತಿರುವ ‘ಇಹ ಲೋಕಾಧಿಪತಿ’ಯನ್ನಾಗಲಿ ಸೇವಿಸಲು ಸಾಧ್ಯವಿಲ್ಲ. ಹೀಗಿರುವಲ್ಲಿ ಕರ್ತನ ಜನರು, ಅಂದರೆ ಕರ್ತನಿಗಾಗಿ ತಮ್ಮನ್ನು ತಾವು ಪ್ರತಿಷ್ಠಿಸಿಕೊಂಡಿರುವವರು, ಪರಲೋಕದಲ್ಲಿ ಗಂಟು ಮಾಡಿಕೊಳ್ಳಲು ಕರೆಯಲ್ಪಟ್ಟವರು. ದೇವರಲ್ಲಿ ಐಶ್ವರ್ಯವಂತರಾಗಿರುವವರೆಲ್ಲರೂ ಪ್ರತಿಷ್ಠೆಪಡಿಸಿಕೊಳ್ಳದ ಲೋಕದ ಜನರ ದೃಷ್ಠಿಯಲ್ಲಿ ಮತ್ತು ಧನವನ್ನು ಪ್ರೀತಿಸುವ ಹಾಗೂ ಯಾವುದೇ ಉದ್ಯೋಗದಲ್ಲಿದ್ದರೂ ಸ್ವಾರ್ಥಿಗಳಾಗಿ ಈ ಲೋಕವನ್ನು ಪ್ರೀತಿಸುವವರ ದೃಷ್ಠಿಯಲ್ಲಿ ಅಪಕೀರ್ತಿ ಅಥವಾ ಗಣನೆಗೆ ಬಾರದವರಾಗಿ ಕಂಡುಬರುವರು. ಅಲ್ಲದೆ, ಇದನ್ನು ಆಘಾತವೆಂದೆಣಿಸದೆ ದೇವರ ರಾಜ್ಯವನ್ನು ಸಂಪಾದಿಸಲು ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುವದು-Z ’00, 318 (R2715). R2717

