3 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಮನಸ್ಸು ಸಿದ್ಧವಾಗಿದೆ. ಸರಿ, ಆದರೆ ದೇಹಕ್ಕೆ ಬಲ ಸಾಲದು ಎಂದು ಹೇಳಿದನು. ಮತ್ತಾಯನು 26:41
ಕೆಲವರು ಎಚ್ಚರವಾಗಿದ್ದು ಪ್ರಾರ್ಥಿಸುವದಿಲ್ಲ, ಮತ್ತೆ ಕೆಲವರು ಪ್ರಾರ್ಥಿಸಿದರೂ ಎಚ್ಚರವಾಗಿರುವದಿಲ್ಲ. ಇದು ತಪ್ಪು, ಸರಿಯಾದದ್ದು ಹಾಗೂ ಸುರಕ್ಷಿತವಾದದ್ದು ಯಾವದೆಂದರೆ ಎರಡನ್ನೂ ಒಟ್ಟುಗೂಡಿಸಿ ಮಾಡುವ ಪ್ರಾರ್ಥನೆ. ಇದನ್ನೆ ನಮ್ಮ ಕರ್ತನು ಬೋಧಿಸಿದ್ದು. ದೇವರ ವಾಕ್ಯದಲ್ಲಿ ನಮಗಾಗಿ ಕೊಟ್ಟಿರುವ ಎಲ್ಲಾ ರೀತಿಯ ಪ್ರೋತ್ಸಾಹ ಹಾಗೂ ಅವುಗಳು ನೆರವೇರುತ್ತಿರುವದು ಎಂಬದಕ್ಕೆ ಸಾಕ್ಷಿಗಳು, ಆತನ ಪ್ರತ್ಯಕ್ಷತೆ ಮತ್ತು ಯುಗದಲ್ಲಾಗುವ ಮಹಾ ಬದಲಾವಣೆಗಳು ಹತ್ತಿರವಾಗುತ್ತಿರುವದು. ನಮ್ಮನ್ನು ಬಲಗೊಳಿಸುವಂಥ ನಂಬಿಕೆ, ನಿರೀಕ್ಷೆ, ಪ್ರಾಮಾಣಿಕತೆ ಮತ್ತು ಪ್ರೀತಿಗಳ ವಿಷಯದಲ್ಲಿ ನಾವು ಎಚ್ಚರಿಕೆಯಾಗಿದ್ದು, ಇವುಗಳ ಅಭಿವೃದ್ಧಿಗಾಗಿ ಸತತವಾಗಿ ಪ್ರಾರ್ಥಿಸುವದು ಅವಶ್ಯ. ನಾವು ಕರ್ತನ ಜನರೊಂದಿಗೆ ಒಟ್ಟುಗೂಡಿ ಪ್ರಾರ್ಥಿಸಬೇಕು; ನಮ್ಮ ಮನೆಗಳಲ್ಲಿ ಕುಟುಂಬವಾಗಿ ಪ್ರಾರ್ಥಿಸಬೇಕು, ಹಾಗೂ ನಾವು ರಹಸ್ಯವಾಗಿಯೂ, ಪ್ರತ್ಯೇಕವಾಗಿಯೂ ಪ್ರಾರ್ಥಿಸುವವರಾಗಿರಬೇಕು-Z ’01, 80 (R2773). R2775

