24 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಇದರ ದೆಸೆಯಿಂದ ದೇವರ ವಿಷಯದಲ್ಲಿಯೂ, ಮನುಷ್ಯರ ವಿಷಯದಲ್ಲಿಯೂ ನಾನು ನಿರ್ದೋಶಿ ಎಂದು ಸಾಕ್ಷಿ ಹೇಳುವ ಮನಸ್ಸು ನನಗೆ ಯಾವಾಗಲೂ ಇರಬೇಕೆಂದು ಅಭ್ಯಾಸಮಾಡಿಕೊಳ್ಳುತ್ತೇನೆ. ಅಪೊಸ್ತಲರ ಕೃತ್ಯಗಳು 24:16
ಬಿದ್ದುಹೋಗಿರುವ ಸ್ಥಿತಿಯಲ್ಲಿರುವ ನಮ್ಮ ಎಲ್ಲಾ ಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ರೀತಿಯಲ್ಲೇ ನಮ್ಮ ಮನಸ್ಸಾಕ್ಷಿಯನ್ನು ಸಹ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಹೀಗೆ ನಮ್ಮ ಮನಸ್ಸಾಕ್ಷಿಯನ್ನು ನಿಯಂತ್ರಿಸಿಕೊಳ್ಳಬೇಕಾದರೆ ಅದಕ್ಕೊಂದು ನಿಯಮವಿದೆ. ನಮ್ಮ ಮನಸ್ಸಾಕ್ಷಿ ಒಂದು ಗಡಿಯಾರವಿದ್ದಂತೆ. ಅದರ ಮುಖ ಫಲಕ (ಗಡಿಯಾರದ) ಘಂಟೆಗಳಿಂದ ಸರಿಯಾದ ರೀತಿಯಲ್ಲಿ ಗುರುತಿಸಲಾಗಿರುತ್ತೆ. ಗಡಿಯಾರವು ಸರಿಯಾದ ಸಮಯವನ್ನು ತೋರಿಸಬೇಕಾದರೆ ಅದರ ಪ್ರಧಾನ ಸುರುಳಿಯನ್ನು (mainspring) ಚಾಲನೆಯ ಸ್ಥಿತಿಯಲ್ಲಿಡುವದು ಅವಶ್ಯ; ಆಗ ನಮಗೆ ಗಡಿಯಾರವು ಸರಿಯಾದ ಸಮಯವನ್ನು ತೋರಿಸುತ್ತದೆ. ಇದೇ ರೀತಿ ನಮ್ಮ ಮನಸ್ಸಾಕ್ಷಿಯು ಸರಿ ಮತ್ತು ತಪ್ಪನ್ನು ತೋರಿಸುತ್ತದೆ. ಅಂದರೆ, ಈ ಸರಿ ತಪ್ಪುಗಳು ಸತ್ಯವಾಗಿವೆಯೇ ಎಂಬದನ್ನು ನೂತನ ಮೈನ್ ಸ್ಪ್ರಿಂಗ್ ಆಗಿರುವ ನೂತನ ಹೃದಯ ಮತ್ತು ನೂತನ ಚಿತ್ತಗಳನ್ನು ನಿಯಂತ್ರಿಸುವದರ ದೇವರ ವಾಕ್ಯದಲ್ಲಿ ಪ್ರೀತಿ ಎಂಬ ನಿಯಮವು ಪ್ರಕಟವಾಗಿದೆ-Z ’00, 360 (R2733). R2735

