7 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಯೇಸುವಿನ ವಿಷಯವಾದ ಸಾಕ್ಷಿಯ ನಿಮಿತ್ತವಾಗಿಯೂ, ದೇವರ ವಾಕ್ಯದ ನಿಮಿತ್ತವಾಗಿಯೂ ತಲೆ ಹೊಯಿಸಿಕೊಂಡವರ ಆತ್ಮಗಳನ್ನೂ ಕಂಡೆನು. ಪ್ರಕಟನೆ 20:4
ಇಲ್ಲಿ ಸೂಚಿಸಿರುವ “ತಲೆಹೊಯಿಸಿಕೊಂಡವರು” ಅಕ್ಷರಶಃವಲ್ಲ; ಅದರೆ, ಅದು ಸಾಂಕೇತಿಕವಾಗಿ ನುಡಿಯಲ್ಪಟ್ಟಿದೆ. ಇದು ನಮಗೆ ತಿಳಿಸುವದೇನಂದರೆ ಸ್ವಾರ್ಥಚಿತ್ತದ ಮರಣವನ್ನಲ್ಲದೆ ಬೇರೆ ಇತರೆ ರಾಜಪ್ರಮುಖರಾಗಲಿ, ಸರಕಾರಗಳಾಗಲಿ ಅಥವಾ ಕಾನೂನುಗಾರರಾಗಲಿ ಇವರಿಂದ ಪ್ರತ್ಯೇಕವಾಗಿದ್ದು ಅಥವಾ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದು ಹಾಕಿಕೊಂಡು ಕ್ರಿಸ್ತನನನ್ನಲ್ಲದೆ ಬೇರೆ ಯಾವ ತಲೆಯನ್ನೂ ಗಣನೆಗೆ ತೆಗೆದುಕೊಳ್ಳಬಾರದು. ಈತನನ್ನು ದೇವರು ಸಭೆಯ ಶಿರಸ್ಸಾಗಿ ನಿಲ್ಲಿಸಿದ್ದಾನೆ. ಸಭೆಯು ಈ ಶಿರಸ್ಸಿಗೆ ದೇಹವಾಗಿದೆ. ಪ್ರತಿಯೊಬ್ಬ ಸದಸ್ಯನ ಶಿರಸ್ಸು ಕ್ರಿಸ್ತನೇ ಆಗಿದ್ದಾನೆ. ಇನ್ನೊಂದು ಅರ್ಥದಲ್ಲಿ ಎಲ್ಲಾ ಸಂಸ್ಥೆಗಳಿಂದಲೂ ಮತ್ತು ಎಲ್ಲಾ ಅಧಿಕಾರಿಗಳಿಂದಲೂ ಬಹಿಷ್ಕರಿಸಲ್ಪಟ್ಟಿರುವದು; ಇದಲ್ಲದೆ, ತಮ್ಮದೇ ಆದ ಚಿತ್ತ ಮತ್ತು ಸ್ವಂತ ತಲೆಯನ್ನು ಸಾಂಕೇತಿಕವಾಗಿ ಕಡಿದುಹಾಕಿ, ಕ್ರಿಸ್ತನ ನಾಯಕತ್ವವನ್ನು ಮತ್ತು ಆತನ ಚಿತ್ತವನ್ನು ತಮ್ಮ ತಲೆಯಾಗಿಸಿಕೊಳ್ಳತಕ್ಕದ್ದು. ರೋಮಾಪುರ ಪತ್ರಿಕೆ 6:3ರಲ್ಲಿ ಅಪೋಸ್ತಲನು ಇದೇ ಅರ್ಥ ಕೊಡುವ ವಿಷಯಕ್ಕೆ ನಮ್ಮ ಗಮನವನ್ನು ಸೆಳೆದಿದ್ದಾನೆ. ಇಲ್ಲಿ ಆತನು ಹೇಳುವದೇನೆಂದರೆ, ಚಿಕ್ಕಹಿಂಡು ಕ್ರಿಸ್ತನ ದೇಹದಲ್ಲಿ ಸೇರುವದಕ್ಕಾಗಿ ದೀಕ್ಷ್ಷಾಸ್ನಾನ ಹೊಂದಿದೆ. ಆ ದೇಹಕ್ಕೆ ಸದಸ್ಯರಾಗಿ ಕ್ರಿಸ್ತನಡಿಯಲ್ಲಿರುವವರು ಹಾಗೂ ಆತನ ಮರಣವನ್ನು ಸೂಚಿಸುವ ದೀಕ್ಷ್ಷಾಸ್ನಾನ ಹೊಂದಿದವರೂ ಆಗಿದ್ದಾರೆ. ಇವರು ತಮ್ಮನ್ನು ಸಂಪೂರ್ಣವಾಗಿ ಕ್ರಿಸ್ತನಿಗಾಗಿ ಪ್ರತಿಷ್ಠೆಪಡಿಸಿಕೊಂಡು ತಮ್ಮ ಜೀವವನ್ನು ಸಂಪೂರ್ಣವಾಗಿ ನಂಬಿಕೆಯಿಂದ ಮರಣಕ್ಕೆ ಒಪ್ಪಿಸುವವರೂ ಆಗಿದ್ದಾರೆ-Z ’00, 285 (R2699). R2700

