16 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ. ಮಾರ್ಕನು 14:8
ನಾವು ವೈಯಕ್ತಿಕವಾಗಿ ಕ್ರಿಸ್ತನ ಬಳಿಗೆ ಬರುವ ಅವಕಾಶವಿದೆ ಎಂಬುದು ಮಾತ್ರವಲ್ಲದೆ, ಕರ್ತನ ಸಹೋದರರನ್ನು ಪ್ರೀತಿ, ಸಹಾನುಭೂತಿ, ಸಂತೋಷ ಮತ್ತು ಶಾಂತಿ ಎಂಬ ಹಿತಕರವಾದ ಸುಗಂಧ ದ್ರವ್ಯದಿಂದ ಅಭಿಷೇಕಿಸಬೇಕು. ಇವು ನಮಗೆ ನಮ್ಮ ಸ್ವಾರ್ಥತೆಯನ್ನು ಬದಿಗಿಟ್ಟು ನಡೆಯುವಾಗ ಬಹು ಬೆಲೆಯುಳ್ಳದ್ದನ್ನು ನಾವು ಕೊಡುತ್ತಿದ್ದೇವೆ ಎಂಬ ಭಾವನೆಯು ನಮಗೆ ಬರಬಹುದು. ಆದರೆ, ನಮ್ಮ ಹಿರಿಯ ಸಹೋದರನ ಎಣಿಕೆಯಲ್ಲಿ ಇದು ಅತಿ ಮುಖ್ಯವಾಗಿ ಕಂಡುಬರುವದು. ಕ್ರಿಸ್ತನು ನುಡಿದಿರುವದೇನಂದರೆ, ನಾವು ಎಷ್ಟರಮಟ್ಟಿಗೆ ಸಹೋದರರಿಗೆ ಏನೇನು ಮಾಡುತ್ತೇವೆಯೋ ಅದನ್ನೆಲ್ಲಾ ಕರ್ತನಿಗೆ ಮಾಡಿದಂತಾಗುತ್ತದೆ ಎಂಬುದೇ. ಅಚ್ಚ ಜಟಾಮಾಂಸಿ ತೈಲ ನಮ್ಮ ಹೃದಯವೇ ಆಗಿದೆ. ಆ ಹೃದಯ, ಒಳ್ಳೆಯ ಭಾವನೆ, ಕರುಣೆ ಮತ್ತು ಪ್ರೀತಿ ಎಂಬ ಸುಗಂಧ ದ್ರವ್ಯದಿಂದ ತುಂಬಿ ಕರ್ತನ ಪರವಾಗಿಯೂ ಹಾಗೂ ಕರ್ತನ ಎಲ್ಲಾ ಶಿಷ್ಯರ ಪರವಾಗಿಯೂ ಆ ಸುಗಂಧ ವಾಸನೆಯುಳ್ಳ ತೈಲವನ್ನು ಅವರ ಮೇಲೆ ಅಭಿಷೇಕಿಸುವ ಅವಕಾಶ ನಮ್ಮದಾಗಿದೆ. ಈ ಸುಗಂಧ ವಾಸನೆಯಂತಿರುವ ಪ್ರೀತಿ ಮತ್ತು ಭಕ್ತಿಯನ್ನು ನಮ್ಮ ಕರ್ತನ ಹೆಸರಿನಲ್ಲಿ ಮಾಡುತ್ತೇವೆ. ಯಾಕಂದರೆ, ನಾವು ಕರ್ತನವರಾಗಿದ್ದೇವೆ-Z ’99, 78, 00 378 (R2447). R2744

