25 ನವೆಂಬರ್ರ ದೈನಂದಿನ ಭಕ್ತಿಚಿಂತನೆ
ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪಡುವಾಗ (ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದಕ್ಕೇನೂ ಸಂಬಂಧಪಟ್ಟವನಲ್ಲ. ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ. ಯಾಕೋಬನು 1:13
ದೇವರು ಪರೀಕ್ಷೆಗಾಗಿ ಅವಕಾಶ ಕೊಡುವ ಶೋಧನೆಗೂ, ಸೈತಾನನಿಂದ ಬರುವ ಶೋಧನೆಗೂ ವ್ಯತ್ಯಾಸವಿದೆ. ದೇವರು ತನ್ನ ಚಿತ್ತದಂತೆ ಪರೀಕ್ಷೆಗಾಗಿ ಅವಕಾಶ ಕೊಡುವ ಶೋಧನೆಯ ಉದ್ದೇಶವೇನೆಂದರೆ, ನಾವು ದೇವರ ತತ್ವಗಳಿಗೂ ಹಾಗೂ ನೀತಿಗೂ ಭದ್ರವಾಗಿ ಪ್ರಾಮಾಣಿಕರಾಗಿ ನಡೆಯುತ್ತಿದ್ದೇವೆಯೋ? ಎಂಬುದನ್ನು ಪರೀಕ್ಷಿಸಲು ಶೋಧಿಸುವನು ಮತ್ತು ಈ ಶೋಧನೆಯಲ್ಲಿ ನಿಲ್ಲುವಂಥ ಭಕ್ತರಿಗೆ ಉಪಯುಕ್ತವಾದ ಆಶೀರ್ವಾದವಾಗುವದು. ಏಕೆಂದರೆ ಅವರು ತಮ್ಮ ನಿಲುವನ್ನು ನೀತಿಗನುಸಾರವಾಗಿ, ಪ್ರಾಮಾಣಿಕವಾಗಿ ತೋರ್ಪಡಿಸುವರು. ಆದರೆ ಸೈತಾನನಿಂದ ಬರುವ ಶೋಧನೆ ದುರುದ್ದೇಶದಿಂದ ಕೂಡಿರುವದು. ಅದು ಭಕ್ತರಿಗೆ ಉರುಲಾಗಿ ಹಳ್ಳಕ್ಕೆ ಬೀಳಿಸುವಂಥದ್ದು ಮತ್ತು ಕೆಟ್ಟದ್ದನ್ನು ಮಾಡಲಿಕ್ಕೆ ಪ್ರೇರೇಪಿಸುವಂಥದ್ದಾಗಿಯೂ, ಸುಳ್ಳನ್ನು ಸತ್ಯವಾಗಿಯೂ, ಸತ್ಯವನ್ನು ಸುಳ್ಳನ್ನಾಗಿಯೂ ಕಾಣಿಸುವಂತೆ ಮಾಡುವದು. ಬೆಳಕನ್ನು ಕತ್ತಲೆಯಂತೆ ಕಾಣಿಸುವ ಹಾಗೆ ಮಾಡುವದು. ಇವುಗಳು ಸೈತಾನನು ಒಡ್ಡುವ ಶೋಧನೆಗಳು. ಈ ರೀತಿಯಲ್ಲಿ ದೇವರು ಮನುಷ್ಯರನ್ನು ಪರಿಶೋಧಿಸುವದಿಲ್ಲ-Z ’04, 7 (R3296). R3297

